ನವದೆಹಲಿ: ಚಿನ್ನಾಭರಣ, ಬೆಳ್ಳಿ ಖರೀದಿಸುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ದೆಹಲಿಯಲ್ಲಿ ಬುಧವಾರ ಚಿನ್ನದ ದರ 10 ಗ್ರಾಂ ಗೆ 350 ರೂ. ಇಳಿಕೆಯಾಗಿದೆ. ಇದರೊಂದಿಗೆ 10 ಗ್ರಾಂ ಚಿನ್ನ 61,700 ರೂಪಾಯಿಗೆ ಮಾರಾಟವಾಗಿದೆ.
ಅದೇ ರೀತಿ ಬೆಳ್ಳಿ ದರ ಕೆಜಿಗೆ ಬರೋಬ್ಬರಿ 1,200 ರೂ. ಕಡಿಮೆಯಾಗಿದ್ದು 74,300 ರೂ.ಗೆ ಮಾರಾಟವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕೂಡ ಚಿನ್ನದ ದರ ಇಳಿಕೆಯಾಗಿದೆ. ಹೀಗಾಗಿ ಬೇಡಿಕೆ ಕುಸಿದು ದೇಶಿಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಕಡಿಮೆಯಾಗಿದೆ ಎಂದು ಹೇಳಲಾಗಿದೆ.