BIG NEWS: ಅಫಿಡವಿಟ್ ನಲ್ಲಿ ಬಹಿರಂಗವಾಯ್ತು ಕಾಂಗ್ರೆಸ್ ನಾಯಕನ ವಿಚ್ಛೇದನ ವಿಚಾರ; 2 ದಶಕದ ದಾಂಪತ್ಯದಿಂದ ದೂರವಾದ ಸಚಿನ್ ಪೈಲಟ್ – ಸಾರಾ ಅಬ್ದುಲ್ಲಾ

ರಾಜಸ್ಥಾನ ಕಾಂಗ್ರೆಸ್​ ನಾಯಕ ಸಚಿನ್​ ಪೈಲಟ್​ ಹಾಗೂ ಅವರ ಪತ್ನಿ ಸಾರಾ ಅಬ್ದುಲ್ಲಾ ತಮ್ಮ ದಾಂಪತ್ಯ ಜೀವನ ಮುರಿದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಎರಡು ದಶಕಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರುವ ಸಚಿನ್​ ಪೈಲಟ್​​ ರಾಜಸ್ಥಾನ ವಿಧಾನಸಭಾ ಚುನಾವಣೆ ಪ್ರಯುಕ್ತ ಸಲ್ಲಿಸಿದ ತಮ್ಮ ಅಫಿಡವಿಟ್​ನಲ್ಲಿ ತನ್ನನ್ನು ತಾನು ಡಿವೋರ್ಸಿ ಎಂದು ಕರೆದುಕೊಂಡಿದ್ದಾರೆ.

ಜಮ್ಮು & ಕಾಶ್ಮೀರದ ಮಾಜಿ ಸಿಎಂ ಹಾಗೂ ನ್ಯಾಷನಲ್​ ಕಾನ್ಫರೆನ್ಸ್​ ಮುಖ್ಯಸ್ಥ ಫಾರೂಕ್​ ಅಬ್ದುಲ್ಲಾ ಪುತ್ರಿ ಸಾರಾ ಅಬ್ದುಲ್ಲಾ ಜೊತೆಯಲ್ಲಿ ತಮ್ಮ ವೈವಾಹಿಕ ಜೀವನ ಮುರಿದು ಬಿದ್ದಿರುವ ಬಗ್ಗೆ ಇದೇ ಮೊದಲ ಬಾರಿಗೆ ಸಚಿನ್​ ಬಾಯ್ಬಿಟ್ಟಿದ್ದಾರೆ.

ಅಂದಹಾಗೆ ಸಚಿನ್​ ಪೈಲಟ್​ ಮತ್ತು ಸಾರಾ ಅಬ್ದುಲ್ಲಾ ಪೈಲಟ್​ 2004ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಆರನ್​ ಹಾಗೂ ವಿಹಾನ್​ ಎಂಬ ಇಬ್ಬರು ಪುತ್ರರಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read