ಕೊಲ್ಕತ್ತಾ: ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ವೇಗದ ಬೌಲರ್ ಶಾಹೀನ್ ಆಫ್ರಿದಿ ವಿಶ್ವ ದಾಖಲೆ ಬರೆದಿದ್ದಾರೆ.
ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲ ಓವರ್ ನಲ್ಲಿ ವಿಕೆಟ್ ಕಬಳಿಸಿದ ಶಾಹೀನ್ ಅಫ್ರಿದಿ ಏಕದಿನ ಕ್ರಿಕೆಟ್ ನಲ್ಲಿ ಅತಿ ವೇಗವಾಗಿ 100 ವಿಕೆಟ್ ಗಳಿಸಿದ ವೇಗದ ಬೌಲರ್ ಎನ್ನುವ ವಿಶ್ವ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.
ಈ ಮೊದಲು ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ 52 ಏಕದಿನ ಪಂದ್ಯಗಳಲ್ಲಿ 100 ವಿಕೆಟ್ ಕಬಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. 51 ಪಂದ್ಯಗಳಲ್ಲಿ ನೂರು ವಿಕೆಟ್ ಗಳಿಸಿದ ಪಾಕಿಸ್ತಾನದ ಎಡಗೈ ವೇಗಿ ಶಾಹೀನ್ ನೂತನ ದಾಖಲೆ ಬರೆದಿದ್ದಾರೆ.
ಪಾಕಿಸ್ತಾನ ಪರ ಏಕದಿನ ಕ್ರಿಕೆಟ್ ನಲ್ಲಿ ಅತಿ ವೇಗವಾಗಿ 100 ವಿಕೆಟ್ ಗಳಿಸಿದ ಬೌಲರ್ ಎನ್ನುವ ಹಿರಿಮೆಗೂ ಶಾಹೀನ್ ಪಾತ್ರರಾಗಿದ್ದಾರೆ. ಸಕ್ಲೈನ್ ಮುಷ್ತಾಕ್ 53 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಶಾಹೀನ್ 51 ಪಂದ್ಯಗಳಲ್ಲಿ 100 ವಿಕೆಟ್ ಕಬಳಿಸಿದ್ದಾರೆ.
ಏಕದಿನ ಕ್ರಿಕೆಟ್ ನಲ್ಲಿ ಅತಿ ವೇಗವಾಗಿ 100 ವಿಕೆಟ್ ಗಳಿಸಿದ ವಿಶ್ವ ದಾಖಲೆ ನೇಪಾಳದ ಸ್ಪಿನ್ನರ್ ಸಂದೀಪ್ ಲಾಮ್ಚಾನೆ ಹೆಸರಿನಲ್ಲಿದೆ. ಅವರು ಕೇವಲ 42 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಏಕದಿನ ಪಂದ್ಯಗಳಲ್ಲಿ ವೇಗಿಗಳಲ್ಲಿ 100 ವಿಕೆಟ್ಗಳಿಗೆ ಕಡಿಮೆ ಪಂದ್ಯಗಳನ್ನು ತೆಗೆದುಕೊಂಡ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ.
ಶಾಹೀನ್ ಅಫ್ರಿದಿ (PAK) – 51*
ಮಿಚೆಲ್ ಸ್ಟಾರ್ಕ್ (AUS) – 52
ಶೇನ್ ಬಾಂಡ್ (NZ) – 54
ಮುಸ್ತಫಿಜುರ್ ರೆಹಮಾನ್ (BAN) – 54
ಬ್ರೆಟ್ ಲೀ (AUS) – 55
ಒಟ್ಟಾರೆ, ಶಹೀನ್ ರಶೀದ್ ಖಾನ್ (44) ಮತ್ತು ಸಂದೀಪ್ ಲಮಿಚಾನೆ (42) ನಂತರ 100 ಏಕದಿನ ವಿಕೆಟ್ಗಳನ್ನು ಕಬಳಿಸಿದ 3ನೇ ವೇಗದ ಆಟಗಾರ.