ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಫಿಟ್ನೆಸ್ ಐಕಾನ್ ಅಂದ್ರೂ ತಪ್ಪೇನಿಲ್ಲ. 48ನೇ ವಯಸ್ಸಿನಲ್ಲೂ 25ರ ಹರೆಯದವರಂತೆ ಕಾಣಿಸ್ತಾಳೆ ಕರಾವಳಿಯ ಈ ಬೆಡಗಿ. ಸಹಜವಾಗಿಯೇ ಶಿಲ್ಪಾ ಶೆಟ್ಟಿಯ ಸೌಂದರ್ಯ ಮತ್ತು ಫಿಟ್ನೆಸ್ ಸೀಕ್ರೆಟ್ ಬಗ್ಗೆ ಎಲ್ಲರಲ್ಲೂ ಕುತೂಹಲವಿದೆ.
ಶಿಲ್ಪಾ ಶೆಟ್ಟಿ ಇಷ್ಟು ಫಿಟ್ ಆಗಿರೋದಕ್ಕೆ ಕಾರಣ ಆಕೆ ಸೇವಿಸುವ ಆರೋಗ್ಯಕರ ಉಪಹಾರ. ಬ್ರೇಕ್‌ಫಾಸ್ಟ್ ಹೆಲ್ದಿಯಾಗಿದ್ದರೆ ನಾವು ದಿನವಿಡೀ ಆಕ್ಟಿವ್ ಆಗಿ ಇರಬಹುದು. ಶಿಲ್ಪಾ ಶೆಟ್ಟಿ ಬೆಳಗಿನ ಉಪಾಹಾರಕ್ಕೆ ಏನೇನು ತಿಂತಾಳೆ ಅನ್ನೋದನ್ನು ನೋಡೋಣ.
ಶಿಲ್ಪಾ ಪ್ರತಿದಿನ ಬೆಳಗಿನ ಉಪಾಹಾರದ ಜೊತೆ ಅವಕಾಡೊ ತಿನ್ನುತ್ತಾರೆ. ಇದು ಸಾಕಷ್ಟು ಪೌಷ್ಠಿಕಾಂಶಗಳನ್ನು ಹೊಂದಿದ್ದು, ಫಿಟ್ ಆಗಿರಲು ಸಹಾಯ ಮಾಡುತ್ತದೆ.
ಇನ್ನು ಬೆಳಗಿನ ಉಪಾಹಾರಕ್ಕಾಗಿ ಓಟ್ಸ್ ತಿನ್ನುವುದು ಕೂಡ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಪ್ರತಿದಿನ ಬೆಳಗ್ಗೆ ಶಿಲ್ಪಾ ಓಟ್ಸ್ ಸೇವಿಸಲು ಮರೆಯುವುದಿಲ್ಲ. ಇನ್ನು ತಾಜಾ ಹಣ್ಣಿನ ರಸ ಕೂಡ ಅವರ ಫೇವರಿಟ್. ಬೆಳಗಿನ ಉಪಾಹಾರದಲ್ಲಿ ಶಿಲ್ಪಾಗೆ ಜ್ಯೂಸ್ ಇರಲೇಬೇಕು. ಇವುಗಳ ಜೊತೆಗೆ ತಪ್ಪದೇ ಡ್ರೈ ಫ್ರೂಟ್ಸ್ ಕೂಡ ತಿನ್ನುತ್ತಾಳೆ.
ಗ್ರೀನ್ ಟೀ ನಮ್ಮನ್ನು ಫಿಟ್ ಮತ್ತು ಆರೋಗ್ಯಕರವಾಗಿಡುತ್ತದೆ. ಹಾಗಾಗಿ ಬೆಳಗ್ಗೆ ಶಿಲ್ಪಾ ಶೆಟ್ಟಿ ಗ್ರೀನ್ ಟೀ ಕೂಡ ಕುಡಿಯುತ್ತಾರೆ. ಆರೋಗ್ಯಕರ ಉಪಹಾರದ ಜೊತೆಗೆ ನಿಯಮಿತ ವ್ಯಾಯಾಮ ಕೂಡ ಶಿಲ್ಪಾ ಶೆಟ್ಟಿಯ ಫಿಟ್ನೆಸ್ ರಹಸ್ಯಗಳಲ್ಲೊಂದು.