ಬೆಂಗಳೂರು : ರಾಜ್ಯ ಸರ್ಕಾರವು ಗರ್ಭಿಣಿ ಮಹಿಳೆಯರು, ಬಾಣಂತಿಯರಿಗೆ ಮಾತೃಪೂರ್ಣ ಯೋಜನೆಯಡಿ ವಿತರಿಸುತ್ತಿದ್ದ ಮೊಟ್ಟೆ ವಿತರಣೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಿದೆ.
ಹೌದು, ಅಪೌಷ್ಠಿಕತೆ ಹೋಗಲಾಡಿಸಲು ಮಾತೃಪೂರ್ಣ ಹಾಗೂ ಸೃಷ್ಟಿ ಯೋಜನೆಯಡಿ 3-6 ವರ್ಷದೊಳಗಿನ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಅಂಗನವಾಡಿ ಮೂಲಕ ಮೊಟ್ಟೆ ವಿತರಿಸುವ ಯೋಜನೆ ಸ್ಥಗಿತಗೊಂಡಿದೆ. ಮೊಟ್ಟೆ ವಿತರಣೆ ಸ್ಥಗಿತಕ್ಕೆ ಬೆಲೆ ಏರಿಕೆ ಕಾರಣ ಎನ್ನಲಾಗಿದೆ.
ರಾಜ್ಯದ ಅಂಗನವಾಡಿ ಕೇಂದ್ರಗಳ ಮೂಲಕ ಮಾತೃಪೂರ್ಣ ಹಾಗೂ ಸೃಷ್ಟಿ ಯೋಜನೆಯಡಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಮೊಟ್ಟೆ ವಿತರಣೆ ಮಾಡಲಾಗುತ್ತಿತ್ತು. ಆದರೆ ದರ ಏರಿಕೆ ಕಾರಣ ನೀಡಿ ಮೊಟ್ಟೆ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಗೆ 12 ತಿಂಗಳವರೆಗೆ ಪ್ರತಿ ತಿಂಗಳೂ 25 ಮೊಟ್ಟೆ, ಸೃಷ್ಟಿ ಯೋಜನೆಯಡಿ ಮಕ್ಕಳಿಗೆ ವಾರದಲ್ಲಿ 2, ಅಪೌಷ್ಟಿಕತೆಯಿರುವ ಮಕ್ಕಳಿಗೆ 5 ಮೊಟ್ಟೆ ವಿತರಿಸಬೇಕು.