HomeIndiaBREAKING NEWS: ಬಿಆರ್ ಎಸ್ ಸಂಸದನಿಗೆ ಚಾಕು ಇರಿತ; ಚುನಾವಣಾ ಪ್ರಚಾರದ ವೇಳೆಯೇ ದಾಳಿ

BREAKING NEWS: ಬಿಆರ್ ಎಸ್ ಸಂಸದನಿಗೆ ಚಾಕು ಇರಿತ; ಚುನಾವಣಾ ಪ್ರಚಾರದ ವೇಳೆಯೇ ದಾಳಿ

ತೆಲಂಗಾಣ: ಚುನಾವಣಾ ಪ್ರಚಾರದ ವೇಳೆ ಆಘಾತಕಾರಿ ಘಟನೆಯೊಂದು ನಡೆದಿದೆ. ಚುನವಣಾ ಪ್ರಚಾರ ಮಾಡುತ್ತಿದ್ದ ಬಿಆರ್ ಎಸ್ ಸಂಸದರೊಬ್ಬರಿಗೆ ವ್ಯಕ್ತಿಯೋರ್ವ ಚಾಕು ಇರಿದಿರುವ ಘಟನೆ ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯಲ್ಲಿ ನಡೆದಿದೆ.

ಸಿದ್ದಿಪೇಟೆ ಜಿಲ್ಲೆಯ ಸುರಂಪಲ್ಲಿ ಗ್ರಾಮದಲ್ಲಿ ಸಂಸದ ಕೋಟಾ ಪ್ರಭಾಕರ ರೆಡ್ಡಿ ಚುನಾವಣಾ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಅಪರಿಚಿತ ವ್ಯಕ್ತಿ ಸಂಸದರ ಕೈಕುಲುಕಲು ಮುಂದಾಗಿದ್ದಾರೆ. ಸಂಸದರು ಕೈ ನೀಡುತ್ತಿದ್ದಂತೆ ಚಾಕು ತೆರೆದು ಏಕಾಏಕಿ ಇರಿದಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಂಭೀರವಾಗಿ ಗಾಯಗೊಂಡಿರುವ ಸಂಸದರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಂದೆಡೆ ಚಾಕು ಇರಿದ ವ್ಯಕ್ತಿಯನ್ನು ತಕ್ಷಣ ಹಿಡಿದ ಸಂಸದರ ಬೆಂಬಲಿಗರು ಆತನನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular