ಕಜಕಿಸ್ತಾನದ ಉಕ್ಕು ದೈತ್ಯ ಆರ್ಸೆಲರ್ ಮಿತ್ತಲ್ ಗೆ ಸೇರಿದ ಗಣಿಯಲ್ಲಿ ಶನಿವಾರ ಸಂಭವಿಸಿದ ಅಗ್ನಿ ದುರಂತದಲ್ಲಿ 32 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.
ಘಟನೆಯ ಸಮಯದಲ್ಲಿ 252 ಗಣಿ ಕಾರ್ಮಿಕರು ಇದ್ದರು, ಅವರಲ್ಲಿ 205 ಜನರನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.
ಕೊಸ್ಟೆಂಕೊ ಗಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಗಾಯಗೊಂಡರವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ. ಬೆಂಕಿ ಕಾಣಿಸಿಕೊಂಡಾಗ ಗಣಿಯೊಳಗೆ ಇದ್ದ 252 ಜನರಲ್ಲಿ 23 ಜನರು ಇನ್ನೂ ಕಾಣೆಯಾಗಿದ್ದಾರೆ ಎಂದು ಲಕ್ಸೆಂಬರ್ಗ್ ಉಕ್ಕು ತಯಾರಕ ಆರ್ಸೆಲರ್ ಮಿತ್ತಲ್ ಟೆಮಿರ್ಟೌ ಹೇಳಿದ್ದಾರೆ.ಕಜಕಿಸ್ತಾನದ ಅಧ್ಯಕ್ಷ ಕಾಸಿಮ್-ಜೊಮಾರ್ಟ್ ಟೊಕಯೆವ್ ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.