
ಕಾರ್ ಸಂಗ್ರಹದ ಕ್ರೇಜ್ ಹೊಂದಿರುವ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತೊಂದು ಐಷಾರಾಮಿ ಕಾರಿನ ಒಡೆಯರಾಗಿದ್ದಾರೆ. ಇತ್ತೀಚಿಗೆ ಅವರು
ಹೊಸ ಲ್ಯಾಂಡ್ ರೋವರ್ ಡಿಫೆಂಡರ್ 130 HSE ಕಾರ್ ಖರೀದಿಸಿದ್ದಾರೆ. ಮುಂಬೈನ ಜುಹುದಲ್ಲಿರುವ ಅವರ ನಿವಾಸ ಜಲ್ಸಾದ ಹೊರಗೆ ಈ ಹೊಸ ಮಾಡೆಲ್ ಕಾಣಿಸಿಕೊಂಡಿತು. ಲ್ಯಾಂಡ್ ರೋವರ್ ಡಿಫೆಂಡರ್ 130 ಅನ್ನು ಮಾರ್ಚ್ 2023 ರಲ್ಲಿ ಭಾರತದಲ್ಲಿ ಪರಿಚಯಿಸಲಾಯಿತು.
ಲ್ಯಾಂಡ್ ರೋವರ್ ಡಿಫೆಂಡರ್ 130 ವಿಶಾಲವಾದ ಮೂರು ಸಾಲು ವಿನ್ಯಾಸವನ್ನು ಹೊಂದಿದೆ. ಎಂಟು ಮಂದಿ ಆರಾಮವಾಗಿ ಕೂರುವ ಅವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿದೆ. ಇದು ಎರಡು ರೂಪಾಂತರಗಳಲ್ಲಿ ಖರೀದಿಸಲು ಸಿಗುತ್ತದೆ. ಅವುಗಳೆಂದರೆ HSE ಮತ್ತು X.
ಗ್ರಾಹಕರ ವಿವಿಧ ಇಂಧನ ಆದ್ಯತೆಗಳನ್ನು ಪೂರೈಸಲು ಡಿಫೆಂಡರ್ 130 ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳಲ್ಲೂ ಲಭ್ಯವಿದೆ. ಈ ಎಸ್ ಯು ವಿ 1.30 ಕೋಟಿ ರೂಪಾಯಿಯಿಂದ 1.41 ಕೋಟಿ ರೂ. ಎಕ್ಸ್ ಶೋ ರೂಂ ಬೆಲೆಯನ್ನು ಹೊಂದಿವೆ.
ಅತ್ಯಾಧುನಿಕ ತಂತ್ರಜ್ಞಾನ ಮತ್ತು ಐಷಾರಾಮಿ ವೈಶಿಷ್ಟ್ಯಗಳೊಂದಿಗೆ ಡಿಫೆಂಡರ್ ಪ್ರಭಾವಶಾಲಿ ಶ್ರೇಣಿಯ ಸೌಕರ್ಯಗಳನ್ನು ಹೊಂದಿದೆ. ಪ್ರಮುಖವಾಗಿ, 11.4 – ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 4 – ಜೋನ್ ಕ್ಲೇಮೇಟ್ ಕಂಟ್ರೋಲ್ ಸಿಸ್ಟಮ್ ಹೊಂದಿದೆ. ಜೊತೆಗೆ ಎಲ್ಲ ಸಾಲಿನಲ್ಲೂ ವೆಂಟಿಲೇಟೆಡ್ ಸೀಟ್ ವ್ಯವಸ್ಥೆಯನ್ನು ಪಡೆದಿದೆ
ಎಂಜಿನ್ ವಿಷಯದಲ್ಲಿ ಇದು 6-ಸಿಲಿಂಡರ್ , 3.0-ಲೀಟರ್ ಪೆಟ್ರೋಲ್ ಎಂಜಿನ್, 389 bhp ಗರಿಷ್ಠ ಪವರ್, 550 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸಿಲಿಂಡರ್ 3.0-ಲೀಟರ್ ಡೀಸೆಲ್ ಎಂಜಿನ್, 292 bhp ಪವರ್ ಮತ್ತು 600 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿದೆ. ಇಂತಹ ವಿಶೇಷ ಹೊಂದಿರುವ ಐಷಾರಾಮಿ ಹೊಂದಿದ್ದಾರೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್


