HomeKarnatakaBIG NEWS : ನಮ್ಮ ಶಾಸಕರಿಗೆ 50 ಕೋಟಿ ಆಫರ್ , ಸಚಿವ ಸ್ಥಾನದ ಆಮಿಷ...

BIG NEWS : ನಮ್ಮ ಶಾಸಕರಿಗೆ 50 ಕೋಟಿ ಆಫರ್ , ಸಚಿವ ಸ್ಥಾನದ ಆಮಿಷ : ರವಿ ಗಣಿಗ ಸ್ಪೋಟಕ ಹೇಳಿಕೆ

ಬಿಜೆಪಿಗೆ ಬಂದರೆ ಮಂತ್ರಿಗಿರಿ ನೀಡುತ್ತೇವೆ ಎಂದು ಹಾಗೂ ನಮ್ಮ ಶಾಸಕರಿಗೆ 50 ಕೋಟಿ ಆಫರ್ ಕೊಟ್ಟಿದ್ದಾರೆ ಎಂದು ಶಾಸಕ ರವಿ ಗಣಿಗಸ್ಪೋಟಕ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು ನನ್ನ ಬಳಿ ಇರುವ ಮಾಹಿತಿಯನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂಗೆ ಹೇಳುತ್ತೇನೆ. ಅವರ ಬಳಿ ಇರುವ ಮಾಹಿತಿ ತೆಗೆದುಕೊಂಡು ಮಾಧ್ಯಮದ ಮುಂದೆ ಬರುತ್ತೇನೆ. ನನಗೆ ಆಫರ್ ನೀಡಲು ಬಂದಿದ್ದರೇ ಲೈವ್ ಮಾಡಿ ತೋರಿಸುತ್ತಿದ್ದೆ ಎಂದರು. ಪಕ್ಷಕ್ಕೆ ಕರೆದಿರುವುದು ನಿಜ ಎಂದು ಅವರೆ ಒಪ್ಪಿಕೊಂಡಿದ್ದಾರೆ. ನಮ್ಮ ಶಾಸಕರಿಗೆ 50 ಕೋಟಿ ಆಫರ್ ಕೊಟ್ಟಿದ್ದಾರೆ. ಬಿಜೆಪಿಗೆ ಬಂದರೇ ಮಂತ್ರಿಗಿರಿ ಕೊಡುತ್ತೇವೆ ಎಂದು ಹೇಳಿದ್ದಾರೆ ಎಂದರು.

ನಮ್ಮ ಪಕ್ಷದ ಪ್ರಾಮಾಣಿಕ ಶಾಸಕರು ಈ ಮಾಹಿತಿಯನ್ನು ಪಕ್ಷದೊಂದಿಗೆ ಹಂಚಿಕೊಂಡಿದ್ದಾರೆ. ಸರ್ಕಾರ ಅಸ್ಥಿರಗೊಳಿಸುವುದಕ್ಕೆ ಹಿರಿಯ ಶಾಸಕರು, ಹೊಸ ಶಾಸಕರನ್ನೂ ಸಂಪರ್ಕಿಸಲಾಗಿದೆ. ಆದರೆ ಯಾವೊಬ್ಬ ಶಾಸಕರೂ ಆಮಿಷಕ್ಕೆ ಬಲಿಯಾಗಿಲ್ಲ. ಈ ಸಂಬಂಧ ಇರುವ ವೀಡಿಯೋ ಹಾಗೂ ದಾಖಲೆಗಳನ್ನು ಶೀಘ್ರವೇ ಬಿಡುಗಡೆ ಮಾಡುತ್ತೇವೆ ಎಂದು ಶಾಸಕರು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular