ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಪುರುಷರ ಬಿ-1 ವಿಭಾಗದ ಪ್ಯಾರಾ ಚೆಸ್ ಸ್ಪರ್ಧೆಯಲ್ಲಿ ಭಾರತದ ದರ್ಪಣ್ ಇರಾನಿ ಚಿನ್ನದ ಪದಕ ಪಡೆದಿದ್ದಾರೆ.
ಪುರುಷರ ಬಿ 1 ವಿಭಾಗದಲ್ಲಿ ಪ್ಯಾರಾ ಚೆಸ್ನಲ್ಲಿ ದರ್ಪಣ್ ಇರಾನಿ ತಮ್ಮ ಅಚಲ ಆಟದ ಮನೋಭಾವ ಮತ್ತು ಅದ್ಭುತ ಕೌಶಲ್ಯದಿಂದ ಚಿನ್ನ ಗೆದ್ದಿದ್ದಾರೆ.
ಮತ್ತೊಂದಡೆ, ಬಿ 1 ವಿಭಾಗದ ಪ್ಯಾರಾ ಚೆಸ್ ಪುರುಷರ ತಂಡದಲ್ಲಿ, ಅಶ್ವಿನ್, ದರ್ಪಣ್ ಮತ್ತು ಸೌಂದರ್ಯ ಅದ್ಭುತ ಪ್ರದರ್ಶನವನ್ನು ನೀಡುವ ಮೂಲಕ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಈ ಮೂಲಕ ಭಾರತದ ಖಾತೆಗೆ ಮತ್ತೊಂದು ಪದಕ ಸೇರ್ಪಡೆಯಾಗಿದೆ.