alex Certify ವಿದ್ಯಾರ್ಥಿಗಳ ಗಮನಕ್ಕೆ : ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಾತಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿಗಳ ಗಮನಕ್ಕೆ : ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಾತಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ

ಬೆಂಗಳೂರು : ಬೆಂಗಳೂರು : ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಾತಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ ಮಾಡಲಾಗಿದ್ದು, ವಿದ್ಯಾರ್ಥಿಗಳು 15:12:2023 ರೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

2023-24ನೇ ಶೈಕ್ಷಣಿಕ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದ ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಪ್ರವೇಶಾತಿ ಸೇವೆಯನ್ನು ಪ್ರಾರಂಭಿಸಿ ಮುಕ್ತಾಯಗೊಳಿಸಲು ಸೂಚಿಸಲಾಗಿತ್ತು, ತದನಂತರ ವಿದ್ಯಾರ್ಥಿಗಳ ಪೋಷಕರಿಂದ ನಿರ್ದೇಶನಾಲಯದಲ್ಲ ಬಂದ ಪ್ರವೇಶಾತಿಯ ಬೇಡಿಕೆಯ ಮನವಿಗಳು, ವಿದ್ಯಾರ್ಥಿಗಳಿಂದ ಅಲ್ಪಸಂಖ್ಯಾತರ ಸಹಾಯವಾಣಿ ಕೇಂದ್ರಕ್ಕೆ ಬಂದ ಮನವಿಗಳು ಮತ್ತು ಕೆಲವು ವಿದ್ಯಾರ್ಥಿನಿಲಯಗಳಲ್ಲಿ ಸೀಟುಗಳು, ಖಾಲಿಯಿರುವ ಕಾರಣ ದಿನಾಂಕ:15.12.2023 ರವರೆಗೆ ವಿಸ್ತರಿಸಲು, ಕಾರ್ಯಕ್ರಮ ನಿರ್ದೇಶಕರು, ರಾಜ್ಯ ವಿದ್ಯಾರ್ಥಿವೇತನ ಹಾಗೂ ವಿದ್ಯಾರ್ಥಿನಿಲಯ ಪೋರ್ಟಲ್ ಕೇಂದ್ರ ಬೆಂಗಳೂರು ರವರಿಗೆ ಕೋರಿದೆ.

ಆದ್ದರಿಂದ, ಎಲ್ಲಾ ಜಿಲ್ಲೆಗಳ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ರವರು 2023-24ನೇ ಶೈಕ್ಷಣಿಕ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದ ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಪ್ರವೇಶಾತಿ ಸೇವೆಯನ್ನು ದಿನಾಂಕ:15.12.2023 ರವರೆಗೆ ವಿಸ್ತರಿಸಿರುವುದರಿಂದ ರಾಜ್ಯ ವಿದ್ಯಾರ್ಥಿನಿಲಯ ತಂತ್ರಾಂಶದಲ್ಲಿ ಆಹ್ವಾನಿಸಿರುವುದನ್ನು ಪುನಃ ಜಿಲ್ಲಾಮಟ್ಟದಲ್ಲಿ ವ್ಯಾಪಕ ಪ್ರಚಾರ ಕೈಗೊಂಡು ನಿಯಮಾನುಸಾರ ಸೀಟುಗಳ ಭರ್ತಿ ಮಾಡಲು ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದೆ.

ವಿಶೇಷ ಸೂಚನೆ:

2023-24ನೇ ಶೈಕ್ಷಣಿಕ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ “ವಿದ್ಯಾಸಿರಿ” ಯೋಜನೆಯನ್ನು ಎಸ್.ಎಚ್.ಪಿ ತಂತ್ರಾಂಶದ ಮೂಲಕವೇ ಅನುಷ್ಠಾನಗೊಳಿಸಲಾಗುತ್ತದೆ, ಈ ಯೋಜನೆಗೆ ರಾಜ್ಯ ವಿದ್ಯಾರ್ಥಿನಿಲಯ ತಂತ್ರಾಂಶದಲ್ಲಿ(ಎಸ್.ಎಚ್.ಪಿ) ಅರ್ಜಿ ಹಾಕಿ: ವಿದ್ಯಾರ್ಥಿನಿಲಯಗಳಲ್ಲ. ಸೀಟು ಲಭ್ಯವಾಗದಿರುವ ವಿದ್ಯಾರ್ಥಿಗಳು ಮಾತ್ರ ಅರ್ಹರಾಗುತ್ತಾರೆ. ವಿದ್ಯಾಸಿರಿ ಯೋಜನೆಗಾಗಿ ಪ್ರತ್ಯೇಕವಾಗಿ ಅರ್ಜಿಗಳನ್ನು ಆಹ್ವಾನಿಸುವುದಿಲ್ಲ.

ಈಗಾಗಲೇ ದಾಖಲಾಗಿರುವ ನವೀಕರಣ ವಿದ್ಯಾರ್ಥಿಗಳ ವಿದ್ಯಾರ್ಥಿನಿಲಯವಾರು ಮಾಹಿತಿಯನ್ನು ಎಸ್.ಎಚ್.ಪಿ ತಂತ್ರಾಂಶದಲ್ಲಿ ಸಂಯೋಜಿಸುವುದು. ನಿರ್ದೇಶನಾಲಯಕ್ಕೆ ಪ್ರಸ್ತುತ ನಿಲಯವಾರು ಮೆಟ್ರಿಕ್ ಪೂರ್ವ/ಮೆಟ್ರಿಕ್ ನಂತರದ ದಾಖಲಾತಿ ಮಾಹಿತಿಯನ್ನು ಜಿಲ್ಲಾ ಅಧಿಕಾರಿಗಳ ಸಹಿಯೊಂದಿಗೆ ಧೃಡೀಕರಿಸಿ ನಿಗದಿತ ನಮೂನೆಯಲ್ಲಿ ಇಂದೇ ಕಳುಹಿಸುವುದು ಎಂದು ಪ್ರಕಟಣೆ ಹೊರಡಿಸಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...