ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಲಭಿಸಿದೆ. ಏಷ್ಯನ್ ಪ್ಯಾರಾ ಗೇಮ್ಸ್ ಮಿಕ್ಸಡ್ ಕಾಂಪೌಂಡ್ ಓಪನ್ ನಲ್ಲಿ ಭಾರತದ ಶೀತಲ್ ದೇವಿ, ರಾಕೇಶ್ ಕುಮಾರ್ ಗೆ ಚಿನ್ನದ ಪದಕ ಲಭಿಸಿದೆ.
ಹೌದು, ಶೀತಲ್ ದೇವಿ ಹಾಗೂ ರಾಕೇಶ್ ಕುಮಾರ್ ಜೋಡಿ ಪ್ಯಾರಾ ಆರ್ಚರಿ ಕಾಂಪೌಂಡ್ ಮಿಶ್ರ ತಂಡದಲ್ಲಿ ತಮ್ಮ ಅಸಾಧಾರಣ ಕೌಶಲ್ಯ ಮತ್ತು ಶಕ್ತಿಯನ್ನು ಪ್ರದರ್ಶಿಸಿದರು. ಈ ಮೂಲಕ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಲಭಿಸಿದೆ.