ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಕ್ಟೋಬರ್ 20 ರ ಶುಕ್ರವಾರದಂದು ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿದಿಳಿದಿದ್ರು. ಬಿಗಿ ಭದ್ರತೆಯಿಂದ ಸುತ್ತುವರೆದಿದ್ದ ಧೋನಿ ಯಾವ ಕಾರ್ಯಕ್ಕಾಗಿ ಚೆನ್ನೈಗೆ ಬಂದಿದಿಳಿದಿದ್ದಾರೆ ಎಂದು ಸ್ಪಷ್ಟವಿಲ್ಲದಿದ್ರೂ ಆಪ್ಘಾನಿಸ್ತಾನ ತಂಡದ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಅವರನ್ನು ಭೇಟಿ ಮಾಡಿದ್ದಾರೆ. ಧೋನಿ ಭೇಟಿ ಬಗ್ಗೆ ಫೋಟೋ ಹಂಚಿಕೊಂಡಿರುವ ರಶೀದ್ ಖಾನ್, ‘ನಿಮ್ಮನ್ನು ಭೇಟಿಯಾಗಲು ಯಾವಾಗಲೂ ಸಂತೋಷವಾಗುತ್ತದೆ ಮಾಹಿ ಭಾಯ್’ ಎಂದಿದ್ದಾರೆ.
ಚೆನ್ನೈನಲ್ಲಿ ಅಕ್ಟೋಬರ್ 23 ರಂದು ಪಾಕಿಸ್ತಾನದ ವಿರುದ್ಧ ಅಫ್ಘಾನಿಸ್ತಾನ ಐಸಿಸಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಹೋರಾಡಲಿದೆ. ಇದಕ್ಕೂ ಮುನ್ನ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಅವರನ್ನು ಧೋನಿ ಭೇಟಿಯಾಗಿದ್ದಾರೆ. ಧೋನಿ ಚೆನ್ನೈ ಟ್ರ್ಯಾಕ್ ಬಗ್ಗೆ ಸಾಕಷ್ಟು ಪರಿಣತಿಯನ್ನು ಹೊಂದಿರುವುದರಿಂದ ರಶೀದ್ ಅನಿವಾರ್ಯವಾಗಿ ಎಂ ಎಸ್ ಡಿ ಬಳಿ ಕೆಲವು ಸಲಹೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ.
ಐಸಿಸಿ ವಿಶ್ವಕಪ್ 2023 ರಲ್ಲಿ ಇದುವರೆಗೂ ಆಡಿರುವ 4 ಪಂದ್ಯಗಳಲ್ಲಿ ಆಫ್ಘಾನಿಸ್ತಾನ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದ್ರೆ, ಪಾಕಿಸ್ತಾನ ಆಡಿರುವ ನಾಲ್ಕು ಪಂದ್ಯಗಳ ಪೈಕಿ ಎರಡಲ್ಲಿ ಜಯ ಸಾಧಿಸಿದೆ. ಇದೇ ಮೊದಲ ಬಾರಿಗೆ ಚೆನ್ನೈನಲ್ಲಿ ಸೋಮವಾರ ಎರಡೂ ತಂಡಗಳು ಮುಖಾಮುಖಿಯಾಗಲಿವೆ.