ಹೆಲ್ಸಿಂಕಿ: ವಿಶ್ವದಾದ್ಯಂತ 14 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ನೋಕಿಯಾ ಟೆಲಿಕಾಂ ಕಂಪನಿ ನಿರ್ಧರಿಸಿದೆ.
ಕಂಪನಿಯ ಉತ್ಪನ್ನ ಮಾರಾಟ ಮತ್ತು ಲಾಭದಲ್ಲಿ ಕುಸಿತವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದಾಗಿ ಕಂಪನಿಯ ಒಟ್ಟು ಉದ್ಯೋಗಿಗಳ ಪೈಕಿ ಶೇಕಡ 16 ರಷ್ಟು ಅಂದರೆ 14000 ಸಿಬ್ಬಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ವಿಶ್ವದಾದ್ಯಂತ ನೋಕಿಯಾ 86,000 ಸಿಬ್ಬಂದಿ ಹೊಂದಿದೆ. ಉತ್ಪಾದನಾ ವೆಚ್ಚ ಕಡಿತ, ಕೆಲಸದ ದಕ್ಷತೆ ಹೆಚ್ಚಳ, ಮಾರಾಟ ಮತ್ತು ಲಾಭದಲ್ಲಿ ಕುಸಿತ ಇವೆ ಮೊದಲಾದ ಕಾರಣಗಳಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.