
ಬಾಗಲಕೋಟೆ: ನಾಪತ್ತೆಯಾದ ವಕೀಲರೊಬ್ಬರ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಕಂಡು ಬಂದಿದೆ. ಗಿರೀಶ್ ಕಾಡಣ್ಣವರ(38) ಕೊಲೆಯಾದ ವಕೀಲ ಎಂದು ಹೇಳಲಾಗಿದೆ.
ಗ್ರಾಮದ ವಾರಿಮಲ್ಲಯ್ಯನ ಗುಡಿ ಬೆಟ್ಟದ ಮೇಲೆ ಕೊಳೆತ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಕಲ್ಲಿನಿಂದ ತಲೆ, ದೇಹವನ್ನು ಜಜ್ಜಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬೀಳಗಿ ತಾಲೂಕು ನ್ಯಾಯಾಲಯದಲ್ಲಿ ವಕೀಲರಾಗಿದ್ದ ಗಿರೀಶ್ ಅಕ್ಟೋಬರ್ 15 ರಂದು ನಾಪತ್ತೆಯಾಗಿದ್ದರು. ಅವರಿಗಾಗಿ ಹುಡುಕಾಟ ನಡೆಸಲಾಗಿತ್ತು. ಬೆಟ್ಟದಲ್ಲಿ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬೀಳಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.