ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಈಗಾಗಲೇ ಅದ್ದೂರಿ ಚಾಲನೆ ಸಿಕ್ಕಿದ್ದು, ಯುವದಸರಾ ಕಾರ್ಯಕ್ರಮಗಳ ಪಟ್ಟಿ ಬಿಡುಗಡೆಯಾಗಿದೆ. ಅಕ್ಟೋಬರ್ 18ರಿಂದ 21ರವರೆಗೆ 4 ದಿನ ಯುವದಸರಾ ಕಾರ್ಯಕ್ರಮ ನಡೆಯಲಿದೆ.
• ಅ.18ರಂದು ನಟ ಶಿವರಾಜ್ ಕುಮಾರ್ ರಿಂದ ಯುವದಸರಾ ಉದ್ಘಾಟನೆ
• ಅ.18ರ ರಾತ್ರಿ 7 ಗಂಟೆಗೆ ಸ್ಯಾಂಡಲ್ವುಡ್ ನೈಟ್ಸ್
• ಅ19ರಂದು ಸಂಜಿತ್ ಹೆಗ್ಡೆ ತಂಡ, ಶಿಲ್ಪಾರಾವ್ ತಂಡದಿಂದ ಸಂಗೀತ ಕಾರ್ಯಕ್ರಮ
• ಅ.20ರಂದು ಆಲ್ ಓಕೆ ಮತ್ತು ಸುಲೈಮಾನ್ ತಂಡದಿಂದ ಕಾರ್ಯಕ್ರಮ
• ಅ.21ಕ್ಕೆ ಮೋಹನ್ ಸಿಸ್ಟರ್ಸ್, ಬೆನ್ನಿ ದಯಾಳ್ ತಂಡದಿಂದ ಕಾರ್ಯಕ್ರಮ
ಮೈಸೂರು ಚಾಮುಂಡಿ ಬೆಟ್ಟದಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾಗೆ ಅ.15 ರಂದು ಸಂಗೀತ ನಿರ್ದೇಶಕ ಹಂಸಲೇಖ ಅಧಿಕೃತ ಚಾಲನೆ ನೀಡಿದ್ದಾರೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ದೊರೆತಿದ್ದು, ನಾದಬ್ರಹ್ಮ, ಸಂಗೀತ ನಿರ್ದೇಶಕ ಹಂಸಲೇಖ ನಾಡ ಅದಿದೇವತೆ ಚಾಮುಂಡೇಶ್ವರಿ ದೇವಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಉದ್ಘಾಟನೆ ಮಾಡಿದರು.ಚಾಮುಂಡಿ ಬೆಟ್ಟದಲ್ಲಿ ಬೆಳಿಗ್ಗೆ 10-15ರಿಂದ 10:30ರ ಶುಭ ವೃಶ್ಚಿಕ ಲಗ್ನದಲ್ಲಿ ನಾದಬ್ರಹ್ಮ ಹಂಸಲೇಖ ದೀಪ ಬೆಳಗುವ ಮೂಲಕ ಚಾಮುಂಡಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೈಸೂರು ದಸರಾ-2023ಕ್ಕೆ ಚಾಲನೆ ನೀಡಿದರು.