ಬೆಂಗಳೂರು : ಶಿವಮೊಗ್ಗ ಟ್ರಯಲ್ ಬ್ಲ್ಯಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಅಧಿಕಾರಿಗಳು ನಾಲ್ವರು ಶಂಕಿತ ಉಗ್ರರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
ತುಂಗಾ ತೀರದಲ್ಲಿ ಟ್ರಯಲ್ ಬಾಂಬ್ ಬ್ಲಾಸ್ಟ್ ಕೇಸ್ ಸಂಬಂಧ ಬಂಧಿತ ಅರಾಫತ್ ಅಲಿ ಜೊತೆಗೆ ಸಂಪರ್ಕದಲ್ಲಿದ್ದ ನಾಲ್ವರಿಗೆ ಎನ್ ಐಎ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ಟ್ರಯಲ್ ಬ್ಲ್ಯಾಸ್ಟ್ ಪ್ರಕರಣ ಸಂಬಂಧ ಶಂಕಿತ ಉಗ್ರರಾದ ಶಂಶುದ್ದೀನ್, ರಿಜ್ವಾನ್, ನಜೀಬುಲ್ಲಾ, ತಮೀಮ್ ಎಂಬುವರಿಗೆ ಅಕ್ಟೋಬರ್ 19 ರ ಮಧ್ಯಾಹ್ನ ಬೆಂಗಳೂರಿನ ಎನ್ ಐಎ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
ಕಳೆದ ತಿಂಗಳು ಎನ್ ಐಎ ದೆಹಲಿಯ ವಿಮಾನ ನಿಲ್ದಾಣದಲ್ಲಿ ಶಂಕಿತ ಉಗ್ರ ಅರಾಫತ್ ಅಲಿ ಎಂಬಾತನನ್ನು ವಿಚಾರಣೆ ನಡೆಸುತ್ತಿತ್ತು. ವಿಚಾರಣೆ ವೇಳೆ ನಾಲ್ವರು ಶಂಕಿತ ಉಗ್ರರು ಈತನ ಜೊತೆಗೆ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ನಾಲ್ವರಿಗೂ ನೋಟಿಸ್ ನೀಡಲಾಗಿದೆ.