KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಮಹಿಳೆಯರಿಗೆ ಗುಡ್ ನ್ಯೂಸ್: ‘ಗೃಹಲಕ್ಷ್ಮಿ ಯೋಜನೆ’ಗೆ 4449 ಕೋಟಿ ರೂ., ಉಚಿತ ಪ್ರಯಾಣದ ‘ಶಕ್ತಿ ಯೋಜನೆ’ಗೆ 1808 ಕೋಟಿ ರೂ. ಮೌಲ್ಯದ ಟಿಕೆಟ್

Published October 16, 2023 at 7:48 pm
Share
SHARE

ಬೆಂಗಳೂರು: ರಾಜ್ಯದ ಎಲ್ಲಾ ಹೆಣ್ಣು ಮಕ್ಕಳಿಗೆ ಸರ್ಕಾರಿ ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆ ಆರಂಭಿಸಲಾಗಿದ್ದು, ಮಹಿಳಾ ಪ್ರಯಾಣಿಕರ ಉಚಿತ ಟಿಕೆಟ್ ಸಂಖ್ಯೆ 77.56 ಕೋಟಿಗೆ ಏರಿಕೆಯಾಗಿದೆ. 4 ಸಾರಿಗೆ ನಿಗಮಗಳಲ್ಲಿ ಮಹಿಳಾ ಪ್ರಯಾಣಿಕರ ಉಚಿತ ಟಿಕೆಟ್ ಮೌಲ್ಯ 1808 ಕೋಟಿ ರೂ. ನಷ್ಟಾಗಿದೆ.

ಇನ್ನು ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಮಾಸಿಕ 2,000 ರೂ. ಸಹಾಯಧನ ನೀಡುವ ಗೃಹಲಕ್ಷ್ಮಿ ಯೋಜನೆಗೆ ಇದುವರೆಗೆ 1.16 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. 1.08 ಕೋಟಿ ಮಹಿಳೆಯರಿಗೆ ಹಣ ಜಮೆಯಾಗಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಸಹಾಯಧನ ಪಾವತಿಗಾಗಿ 4449 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.

ಸ್ತ್ರೀಶಕ್ತಿ ಆರಾಧನೆಯ ಈ ನವರಾತ್ರಿ ಹಬ್ಬದ ಸಂದರ್ಭದಲ್ಲಿ ನಮ್ಮ ಸರ್ಕಾರವು ಸ್ತ್ರೀಸಬಲೀಕರಣಕ್ಕೆ ಬದ್ಧವಾಗಿ ಶ್ರಮಿಸುತ್ತಿದೆ. ಪ್ರಶಕ್ತ ಸಾಲಿನ ಬಜೆಟ್ ನಲ್ಲಿ ಮಹಿಳಾ ಕಲ್ಯಾಣ ಕಾರ್ಯಕ್ರಮಗಳಿಗೆ 70,427 ಕೋಟಿ ರೂ. ಹಣ ಮೀಸಲಿಟ್ಟು ಸ್ತ್ರೀ ಸಬಲೀಕರಣದ ನಿಟ್ಟಿನಲ್ಲಿ ನವಯುಗಕ್ಕೆ ನಾಂದಿ ಹಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.

ನಾಡಿನ ಎಲ್ಲಾ ಹೆಣ್ಣುಮಕ್ಕಳಿಗೆ ಶಕ್ತಿ ಯೋಜನೆಯಡಿ ಸರ್ಕಾರಿ ಸಾರಿಗೆ ಬಸ್‌ ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿ, ಚುನಾವಣಾ ಪೂರ್ವದಲ್ಲಿ ನಾವು ಕೊಟ್ಟ ಭರವಸೆಯನ್ನು ಈಡೇರಿಸಿದ್ದೇವೆ. ಇದರಿಂದ ಶಿಕ್ಷಣ, ಉದ್ಯೋಗ ಮುಂತಾದ ವಿಷಯಗಳಿಗೆ ಹೆಣ್ಣುಮಕ್ಕಳು ಕುಟುಂಬದ ಯಜಮಾನನ ಮೇಲೆ ಅವಲಂಬಿತರಾಗದೆ, ಸ್ವಾವಲಂಬಿಗಳಾಗಿ ನಿರ್ಣಯ ಕೈಗೊಳ್ಳಲು ಸಾಧ್ಯವಾಗಿರುವುದು ಯೋಜನೆಯ ಯಶಸ್ಸಿಗೆ ಹಿಡಿದ ಕನ್ನಡಿಯಾಗಿದೆ. ಯೋಜನೆ ಜಾರಿಗೊಂಡ ನಂತರದ 126 ದಿನಗಳ ಅವಧಿಯಲ್ಲಿ 77 ಕೋಟಿಗೂ ಅಧಿಕ ಉಚಿತ ಪ್ರಯಾಣದ ಟಿಕೆಟ್ ನೀಡಲಾಗಿದ್ದು, ಇದಕ್ಕಾಗಿ ನಮ್ಮ ಸರ್ಕಾರವೂ 1808 ಕೋಟಿ ರೂ. ಹಣ ವಿನಿಯೋಗಿಸಿದೆ ಎಂದು ತಿಳಿಸಿದ್ದಾರೆ.

ಕುಟುಂಬ ನಿರ್ವಹಣೆಯ ಹೊಣೆಹೊತ್ತ ಮನೆಯ ಯಜಮಾನಿಯರು ನಿತ್ಯ ಎದುರಿಸುವ ಸವಾಲುಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಉದ್ದೇಶದಿಂದ ನಮ್ಮ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2,000 ರೂ. ಧನಸಹಾಯ ನೀಡಲಾಗುತ್ತಿದೆ. ರಾಜ್ಯದ 1.08 ಕೋಟಿ ಮಹಿಳೆಯರಿಗೆ ಈಗಾಗಲೇ ಎರಡು ತಿಂಗಳ ಹಣ ಜಮೆಯಾಗಿದ್ದು, ಈ ಉದ್ದೇಶಕ್ಕಾಗಿ ಸರ್ಕಾರವು 4,449 ಕೋಟಿ ಅನುದಾನ ಬಳಕೆ ಮಾಡಿದೆ ಎಂದು ಸಿಎಂ ತಿಳಿಸಿದ್ದಾರೆ.

https://twitter.com/CMofKarnataka/status/1713904368356106606

https://twitter.com/CMofKarnataka/status/1713868611696443632

You Might Also Like

BREAKING NEWS: ಜನಾರ್ದನ ರೆಡ್ಡಿಗೆ ಮತ್ತೊಂದು ಬಿಗ್ ಶಾಕ್: ಶಾಸಕ ಸ್ಥಾನದಿಂದ ಅನರ್ಹ

BREAKING NEWS: ಪಾಕ್ ದಾಳಿ ಹಿನ್ನೆಲೆ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯ ಅರ್ಧಕ್ಕೇ ಸ್ಥಗಿತ

BREAKING: ಭಾರತದ ಮೇಲೆ ಪಾಕಿಸ್ತಾನದಿಂದ ಡ್ರೋನ್ ದಾಳಿ: ಜಮ್ಮು ವಾಯುನೆಲೆ ಗುರಿಯಾಗಿಸಿ ಫೈರಿಂಗ್

ಕೇರಳ ಮಹಿಳೆಗೆ ಒಂದು ವಾರದಿಂದ ಜ್ವರ, ಕೆಮ್ಮು, ಉಸಿರಾಟ ತೊಂದರೆ: ಮಾದರಿ ಪರೀಕ್ಷೆಯಲ್ಲಿ ‘ನಿಫಾ ವೈರಸ್’ ದೃಢ | Nipah Virus

GOOD NEWS: IOCL ನಲ್ಲಿ 1770 ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಕೆ ಆರಂಭ

TAGGED:womenGovtCM Siddaramaiahಸಿಎಂ ಸಿದ್ಧರಾಮಯ್ಯಸರ್ಕಾರಗೃಹಲಕ್ಷ್ಮಿ ಯೋಜನೆaccountShakti Yojaneಶಕ್ತಿ ಯೋಜನೆ
Share This Article
Facebook Copy Link Print

Latest News

BREAKING NEWS: ಜನಾರ್ದನ ರೆಡ್ಡಿಗೆ ಮತ್ತೊಂದು ಬಿಗ್ ಶಾಕ್: ಶಾಸಕ ಸ್ಥಾನದಿಂದ ಅನರ್ಹ
BREAKING NEWS: ಪಾಕ್ ದಾಳಿ ಹಿನ್ನೆಲೆ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯ ಅರ್ಧಕ್ಕೇ ಸ್ಥಗಿತ
BREAKING: ಭಾರತದ ಮೇಲೆ ಪಾಕಿಸ್ತಾನದಿಂದ ಡ್ರೋನ್ ದಾಳಿ: ಜಮ್ಮು ವಾಯುನೆಲೆ ಗುರಿಯಾಗಿಸಿ ಫೈರಿಂಗ್
ಕೇರಳ ಮಹಿಳೆಗೆ ಒಂದು ವಾರದಿಂದ ಜ್ವರ, ಕೆಮ್ಮು, ಉಸಿರಾಟ ತೊಂದರೆ: ಮಾದರಿ ಪರೀಕ್ಷೆಯಲ್ಲಿ ‘ನಿಫಾ ವೈರಸ್’ ದೃಢ | Nipah Virus

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಡಾನ್ಸ್ ಮಾಡಿದ ಪೊಲೀಸ್ ಅಮಾನತು…! ಮಹಿಳೆಯರ ಬೋಗಿಯಲ್ಲಿ ಕುಣಿದಿದ್ದೆ ಮುಳುವಾಯ್ತು | Watch
ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ: ಮುಂದಿನ ತಿಂಗಳಿಂದ ‘ಅನ್ನಭಾಗ್ಯ ಯೋಜನೆ’ಯಡಿ ಉಚಿತವಾಗಿ ಅಕ್ಕಿ ಜತೆಗೆ ರಾಗಿ, ಜೋಳ ವಿತರಣೆ
SHOCKING : ರಾಜ್ಯದಲ್ಲಿ ಆಘಾತಕಾರಿ ಘಟನೆ : ಯುವತಿಗೆ ಲೈಂಗಿಕ ಕಿರುಕುಳ ನೀಡಿದ ‘KSRTC’ ಬಸ್ ಕಂಡಕ್ಟರ್.!
BREAKING: ಪ್ರತಿಭಟನಾನಿರತ ಭಾರತೀಯರ ಕತ್ತು ಸೀಳುವ ಸನ್ನೆ ಮಾಡಿದ ಪಾಕಿಸ್ತಾನ ಅಧಿಕಾರಿ ಉದ್ಧಟತನ | WATCH VIDEO

Automotive

ಪಾದಚಾರಿ ಮಾರ್ಗದಲ್ಲಿ ಬೈಕ್ ಓಡಿಸಿದ ಸವಾರ ; ಪ್ರಶ್ನಿಸಿದ ವೃದ್ಧನ ಮೇಲೆ ಹಲ್ಲೆ | ಆಘಾತಕಾರಿ ವಿಡಿಯೋ ವೈರಲ್
BIG NEWS: ದೆಹಲಿ-ಗುರುಗ್ರಾಮ್ ಪ್ರಯಾಣಿಕರಿಗೆ ಸಿಹಿ ಸುದ್ದಿ ; ಮೇ ಅಂತ್ಯಕ್ಕೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ !
BREAKING : ‘ಏರ್ ಶೋ’ ಎಫೆಕ್ಟ್ : ಬೆಂಗಳೂರಲ್ಲಿ ಭಯಂಕರ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ

Entertainment

ನೃತ್ಯ ಗುರುವಿಗೆ ಸಿಕ್ಕ ಗೌರವ ಕಂಡು ಬೆರಗಾದ ಪ್ರಿಯಾಂಕಾ ; ಫೋಟೋಗಾಗಿ ವಿಮಾನವನ್ನೇ ತಡೆದ ಅಭಿಮಾನಿ !
BIG NEWS: ಸಾವಿನ ಅಂಚಿನ ಚಿತ್ರರಂಗಕ್ಕೆ ಬೋಲ್ಟೆ ಇಲ್ಲಾ ಇನ್ನು ಟೈಟ್ ಮಾಡಿ ಏನು ಪ್ರಯೋಜನ? ನಟ ಜಗ್ಗೇಶ್ ಕಿಡಿ
ಕುಡಿತದ ಚಟದಿಂದ ನರಳಿದ ನಟ ಹೃತಿಕ್ ಸಹೋದರಿ : ಮದ್ಯ ವ್ಯಸನ ಜಯಿಸಿದ ಕಥೆ ಬಿಚ್ಚಿಟ್ಟ ಸುನೈನಾ !

Sports

BREAKING NEWS: ಪಾಕ್ ದಾಳಿ ಹಿನ್ನೆಲೆ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯ ಅರ್ಧಕ್ಕೇ ಸ್ಥಗಿತ
ಧರ್ಮಶಾಲಾದಲ್ಲಿ ನಿಗದಿಯಾಗಿದ್ದ ಐಪಿಎಲ್ ಪಂದ್ಯ ಸ್ಥಳಾಂತರ
 ಟೀಂ ಇಂಡಿಯಾ ನಾಯಕನ ರೇಸ್ ನಲ್ಲಿ ಕನ್ನಡಿಗ ಕೆ.ಎಲ್. ರಾಹುಲ್

Special

ಕೆಲವೊಮ್ಮೆ ಏನಾದ್ರು ಮುಟ್ಟಿದ್ರೆ ʼಶಾಕ್ʼ ಹೊಡೆಯೋದೇಕೆ ? ಇದರ ಹಿಂದಿದೆ ಇಂಟ್ರಸ್ಟಿಂಗ್‌ ಕಾರಣ !
ಪ್ರತಿ ದಿನ ಎಷ್ಟು ನೀರು ಕುಡಿಯಬೇಕು ? ಇಲ್ಲಿದೆ ಉಪಯುಕ್ತ ಮಾಹಿತಿ
ʼಸೀತಾಫಲʼ ಹಣ್ಣಿನ ಸೇವನೆಯಿಂದ ಸಿಗುತ್ತೆ ಈ ಎಲ್ಲಾ ಪ್ರಯೋಜನ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?