ಬೆಂಗಳೂರು : ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಅಕ್ಕಿ, ದವಸ ಧಾನ್ಯದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ ಮೂರು ತಿಂಗಳಿನಿಂದ ಅಕ್ಕಿ ಬೆಲೆ ಕ್ವಿಂಟಾಲ್ ಗೆ 300 ರೂ. ಏರಿಕೆಯಾಗಿದೆ.
ರಾಜ್ಯದಲ್ಲಿ ಕಳೆದ ಮೂರು ತಿಂಗಳಿನಿಂದ 25 ಕೆಜಿ ತೂಕದ ಅಕ್ಕಿ ಮೊಟೆ 13,00 ರೂ. ನಿಂದ 1600 ರೂ.ವರೆಗೆ ಏರಿಕೆಯಾಗಿದೆ. ಕೆಜಿಗೆ 3 ರೂ.ಹೆಚ್ಚಳವಾಗಿದೆ. ಅಕ್ಕಿಯ ಜೊತೆಗೆ ಗೋಧಿಯ ಬೆಲೆಯೂ ಹೆಚ್ಚಾಗಿದ್ದು, ಕ್ವಿಂಟಾಲ್ ಗೋಧಿ 200 ರೂ. ನಿಂದ 300 ರೂ. ಹೆಚ್ಚಳವಾದ್ರೆ, ತೊಗರಿ, ಉದ್ದು ಸೇರಿದಂತೆ ಇತೆ ಧಾನ್ಯಗಳ ಬೆಲೆಯಲ್ಲೂ 10 ರೂ.ವರೆಗೆ ಏರಿಕೆಯಾಗಿದೆ. ಈ ಮೂಲಕ ಜನಸಾಮಾನ್ಯರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ.
ರಾಜ್ಯ ಸರ್ಕಾರವು ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ ಬದಲು ಖಾತೆಗೆ ಹಣ ಮಾಡುತ್ತಿದೆ. ಹೀಗಾಗಿಯೇ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.