ಹಣ ಹೂಡಿಕೆ ಮಾಡುವುದು ಪ್ರತಿಯೊಬ್ಬರಿಗೂ ಅನಿವಾರ್ಯ. ಕಡಿಮೆ ಹಣವನ್ನು ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಲಾಭವನ್ನು ಗಳಿಸುವ ಅನೇಕ ಯೋಜನೆಗಳಿವೆ. ಆದರೆ ಇದೊಂದು ಅಪರೂಪದ ಯೋಜನೆ. ಈ ಸ್ಕೀಮ್‌ನಲ್ಲಿ ಕೇವಲ ಒಂದು ಕಪ್ ಚಹಾದ ಬೆಲೆಯನ್ನು ಉಳಿತಾಯ ಮಾಡಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು 5,000 ರೂಪಾಯಿಗಳನ್ನು ಪಡೆಯಬಹುದು.
ಅಟಲ್ ಪಿಂಚಣಿ ಯೋಜನೆ ಎಂಬ ಸರ್ಕಾರಿ ಸ್ಕೀಮ್ ಇದು. ನೀವು 18 ನೇ ವಯಸ್ಸಿನಲ್ಲಿ ಅಟಲ್ ಪಿಂಚಣಿ ಯೋಜನೆಯಲ್ಲಿ ಪ್ರತಿ ದಿನ 7 ರೂಪಾಯಿ ಉಳಿತಾಯ ಮಾಡಿದ್ರೆ, ಈ ಮಾಸಿಕ ಹೂಡಿಕೆಯನ್ನು ಪ್ರಾರಂಭಿಸಿದರೆ ನಿವೃತ್ತಿಯ ನಂತರ ಪ್ರತಿ ತಿಂಗಳು 5000 ರೂಪಾಯಿ ಪಿಂಚಣಿ ದೊರೆಯುತ್ತದೆ.
ಮಾಸಿಕ ಹೂಡಿಕೆ ಎಷ್ಟು?
ಅಟಲ್ ಪಿಂಚಣಿ ಯೋಜನೆಯ ಅಡಿಯಲ್ಲಿ 18 ವರ್ಷಗಳ ನಂತರ ಹೂಡಿಕೆ ಮಾಡಲು ಪ್ರಾರಂಭಿಸಿದರೆ ಪ್ರತಿ ತಿಂಗಳು ಕನಿಷ್ಠ 210 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಅಂದರೆ ಪ್ರತಿದಿನ 7 ರೂಪಾಯಿ ಉಳಿಸುವ ಮೂಲಕ 210 ರೂಪಾಯಿ ಠೇವಣಿ ಮಾಡಬಹುದು. 60 ವರ್ಷಗಳ ನಂತರ ಮೆಚ್ಯೂರಿಟಿ ಪೂರ್ಣಗೊಂಡಾಗ ಪ್ರತಿ ತಿಂಗಳು 5000 ರೂಪಾಯಿಗಳನ್ನು ಪಿಂಚಣಿಯಾಗಿ ನೀಡಲಾಗುತ್ತದೆ.
25 ನೇ ವಯಸ್ಸಿನಲ್ಲಿ ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ ಮಾಸಿಕ 376 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. 30 ವರ್ಷಕ್ಕೆ ಪ್ರಾರಂಭಿಸಿದರೆ 577 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. 35ನೇ ವಯಸ್ಸಿನಲ್ಲಿ ಪ್ರಾರಂಭಿಸಿದರೆ ಈ ಯೋಜನೆ ಅಡಿಯಲ್ಲಿ ಮಾಸಿಕ 902 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಇದೇ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ಮಾಸಿಕ 5000 ರೂಪಾಯಿಗಳ ಪಿಂಚಣಿ ಪಡೆಯಲು ಅರ್ಹರಾಗಬಹುದು.
ಅಟಲ್ ಪಿಂಚಣಿ ಯೋಜನೆ ಬಗ್ಗೆ ಮಾಹಿತಿ…
ಅಟಲ್ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ ನಿರ್ವಹಿಸುತ್ತಿದೆ. ಇದು ಖಾತರಿಯ ಮಾಸಿಕ ಪಿಂಚಣಿ ಯೋಜನೆ. ಇದನ್ನು 2015-16 ರಲ್ಲಿ ಪ್ರಾರಂಭಿಸಲಾಯಿತು. ಕಾರ್ಮಿಕರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆಂದೇ ಪ್ರಾರಂಭಿಸಿದ ಸ್ಕೀಮ್ ಇದು. ಇದರಲ್ಲಿ 1000 ರೂಪಾಯಿಯಿಂದ 5000ದವರೆಗೆ ಪಿಂಚಣಿ ನೀಡಲಾಗುತ್ತದೆ. ಈ ಯೋಜನೆಯಲ್ಲಿ 18 ರಿಂದ 40 ವರ್ಷಗಳವರೆಗೆ ಹೂಡಿಕೆ ಮಾಡಬಹುದು.