alex Certify 100 ವರ್ಷ ಬದುಕುವ ಈ ದೇಶದ ಜನರಿಗೆ ಯಾವ ಕಾಯಿಲೆಯೂ ಬರುವುದಿಲ್ಲ; ಇಲ್ಲಿದೆ ಅವರ ಆರೋಗ್ಯದ ಗುಟ್ಟು ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

100 ವರ್ಷ ಬದುಕುವ ಈ ದೇಶದ ಜನರಿಗೆ ಯಾವ ಕಾಯಿಲೆಯೂ ಬರುವುದಿಲ್ಲ; ಇಲ್ಲಿದೆ ಅವರ ಆರೋಗ್ಯದ ಗುಟ್ಟು !

ಯುದ್ಧಪೀಡಿತ ಇಸ್ರೇಲ್‌ನಲ್ಲಿ ಜನಸಂಖ್ಯೆ ಕಡಿಮೆ. ಆದರೆ ಇಲ್ಲಿನ ಜನರಲ್ಲಿ ಅಪಾರ ದೇಶಪ್ರೇಮ, ದೇಶಭಕ್ತಿ, ದೇಶಕ್ಕಾಗಿಯೇ ಬದುಕುವ ಮನೋಭಾವ, ಬಲವಾದ ಧೈರ್ಯ ಮತ್ತು ಚೈತನ್ಯವಿದೆ. ಇದೇ ಕಾರಣದಿಂದಲೇ ದಶಕಗಳಿಂದಲೂ ಇಸ್ರೇಲ್‌ ಶತ್ರು ದೇಶಗಳನ್ನು ಸೋಲಿಸುತ್ತ ಬಂದಿದೆ. ಇಸ್ರೇಲ್‌ ಜನರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡುತ್ತಾರೆ. ಹಾಗಾಗಿ ಇಸ್ರೇಲಿಗರು ಆರಾಮಾಗಿ 100 ವರ್ಷ ಬದುಕುತ್ತಾರೆ.

ದೀರ್ಘಾಯುಷ್ಯಕ್ಕಾಗಿ ಇಸ್ರೇಲಿಗರು ಏನು ಮಾಡುತ್ತಾರೆ ? ವೃದ್ಧಾಪ್ಯದಲ್ಲಿಯೂ ಅಪಾಯಕಾರಿ ಕಾಯಿಲೆಗಳಿಂದ ದೂರವಿರುವುದು ಹೇಗೆ ಅನ್ನೋದು ಇಂಟ್ರೆಸ್ಟಿಂಗ್‌ ಸಂಗತಿ. ದೀರ್ಘಾಯುಷ್ಯದ ವಿಷಯಕ್ಕೆ ಬಂದರೆ ಜಪಾನ್ ಮತ್ತು ಕೊರಿಯಾ ಹೆಸರನ್ನು ನಾವೆಲ್ಲ ಕೇಳಿದ್ದೇವೆ. ಅದೇ ರೀತಿ ಇಸ್ರೇಲ್‌ ಕೂಡ. ಇಲ್ಲಿನ ಜನರು ಇತರ ದೇಶಗಳಿಗೆ ಹೋಲಿಸಿದರೆ ಅತ್ಯಂತ ಆರೋಗ್ಯವಾಗಿರುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯ ಜೀವಿತಾವಧಿ ಮತ್ತು ಆರೋಗ್ಯಕರ ಜೀವಿತಾವಧಿಯ ವರದಿಯ ಪ್ರಕಾರ, ಇತರ ದೇಶಗಳಿಗಿಂತ ಇಸ್ರೇಲಿಗರ ಜೀವಿತಾವಧಿ ಹೆಚ್ಚು. ಈ ದೇಶ ಟಾಪ್ 10 ಪಟ್ಟಿಯಲ್ಲಿದೆ.

ಇಸ್ರೇಲ್ ಜನರ ದೀರ್ಘಾಯುಷ್ಯದ ರಹಸ್ಯವೆಂದರೆ ಅಲ್ಲಿನ ಸರ್ಕಾರಿ ವ್ಯವಸ್ಥೆ ಮತ್ತು ಆರೋಗ್ಯಕರ ಆಹಾರ. ಅಲ್ಲಿನ ಜನರು ಆರೋಗ್ಯಕ್ಕೆ ಹಾನಿಕಾರಕವಾದ ವಸ್ತುಗಳಿಂದ ದೂರವಿರುತ್ತಾರೆ. ಪೋಷಕರು ತಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ಉತ್ತಮ ಆಹಾರ, ವ್ಯಾಯಾಮ, ಧ್ಯಾನ ಮಾಡಿಸುತ್ತಾರೆ.

ಇಸ್ರೇಲ್‌ ನಿವಾಸಿಗಳು ಅತ್ಯಂತ ಕಡಿಮೆ ಉಪ್ಪು ಸೇವಿಸುತ್ತಾರೆ. ಹೆಚ್ಚು ಉಪ್ಪು ಸೇವನೆಯಿಂದ ಅಧಿಕ ರಕ್ತದೊತ್ತಡದ ಸಮಸ್ಯೆ ಉಂಟಾಗುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಮುಖ್ಯ ಕಾರಣ.

ಕಡಿಮೆ ಕ್ಯಾಲೋರಿ ಆಹಾರವನ್ನು ಸೇವಿಸುತ್ತಾರೆ. ಬಹುಅಪರ್ಯಾಪ್ತ ಮತ್ತು ಮೊನೊಸಾಚುರೇಟೆಡ್ ಕೊಬ್ಬುಗಳನ್ನು ಹೊಂದಿರುವ ಆಹಾರವನ್ನು ತಿನ್ನುತ್ತಾರೆ. ಕ್ಯಾನೋಲಾ, ಆಲಿವ್, ಸೋಯಾಬೀನ್, ಕಾರ್ನ್, ಸೂರ್ಯಕಾಂತಿ, ಅಗಸೆ ಬೀಜಗಳ ಎಣ್ಣೆ ಮತ್ತು ಆವಕಾಡೊ, ಬಾದಾಮಿ, ಸಾಲ್ಮನ್ ಇತ್ಯಾದಿಗಳನ್ನು ಹೆಚ್ಚು ಬಳಸುತ್ತಾರೆ.

ರಾಗಿ ಕೂಡ ಇಲ್ಲಿನ ಜನರ ಪ್ರಮುಖ ಆಹಾರ. ರಾಗಿ ಹಿಟ್ಟನ್ನು ಬ್ರೆಡ್ ಅಥವಾ ಇತರ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದು ಹೆಚ್ಚು ಫೈಬರ್, ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇದರಿಂದ ದೇಹವನ್ನು ಸ್ಥೂಲಕಾಯವಿಲ್ಲದೆ ಸದೃಢಗೊಳಿಸಬಹುದು.

ಇಸ್ರೇಲಿ ಜನರು ದೇಹದಲ್ಲಿ ಖನಿಜಗಳ ಕೊರತೆಯಾಗದಂತೆ ನೋಡಿಕೊಳ್ಳುತ್ತಾರೆ. ವೃದ್ಧಾಪ್ಯದಲ್ಲಿ ಮಾರಣಾಂತಿಕ ಕಾಯಿಲೆಗಳ ಅಪಾಯ ಹೆಚ್ಚು. ಆದ್ದರಿಂದ ಇಸ್ರೇಲಿಗಳು ಈ ವಯಸ್ಸಿನಲ್ಲಿ ಪೌಷ್ಟಿಕಾಂಶದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಪೌಷ್ಟಿಕಾಂಶದ ಆಹಾರವು ದೀರ್ಘಕಾಲದ ಕಾಯಿಲೆಗಳನ್ನು ದೂರವಿಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...