ಸಂಬಳದಲ್ಲಿ ಉಳಿತಾಯ ಮಾಡಲಾಗದೆ ಒದ್ದಾಡುತ್ತಿದ್ದಿರಾ……? ಇಲ್ಲಿದೆ ಟಿಪ್ಸ್

ಸಂಬಳ ಕಡಿಮೆಯಾದರೆ ಸಂತಸವೂ ಕಡಿಮೆ ಆಗಬೇಕೆ? | udayavani

ಯಾವುದೇ ವ್ಯಕ್ತಿಯ ಯಶಸ್ಸನ್ನು ಸಮಾಜ ಅಳೆಯುವುದು ಅವರ ಆರ್ಥಿಕ ಸ್ಥಾನಮಾನದ ಮೇಲೆ. ಸ್ವಂತ ಮನೆ, ಕಾರು, ಚಿನ್ನ ಬೆಳ್ಳಿ , ಬ್ಯಾಂಕ್ ಖಾತೆಯಲ್ಲಿ ಒಳ್ಳೆಯ ಬ್ಯಾಲೆನ್ಸ್ ಇವೆಲ್ಲಾ ಒಬ್ಬ ವ್ಯಕ್ತಿ ಆರ್ಥಿಕವಾಗಿ ಒಳ್ಳೆಯ ಸ್ಥಿತಿಯಲ್ಲಿ ಇದ್ದಾನೆ ಎಂಬುದನ್ನು ತೋರಿಸುತ್ತದೆ.

ಪ್ರಪಂಚದ ಹೆಸರಾಂತ ಆರ್ಥಿಕ ತಜ್ಞರ ಸಾಮಾನ್ಯ ಅಭಿಪ್ರಾಯದಂತೆ ಪ್ರತಿಯೊಬ್ಬರೂ ತಿಂಗಳ ಸಂಬಳದಲ್ಲಿ ಮೊದಲು ಉಳಿತಾಯಕ್ಕೆಂದು ತೆಗೆದಿಟ್ಟು ನಂತರವಷ್ಟೇ ಖರ್ಚು ಮಾಡಬೇಕು ಎಂದು.

ಆದರೆ ಬಡ ಹಾಗೂ ಮಧ್ಯಮ ವರ್ಗದ ಜನರು ಮೊದಲು ಖರ್ಚು ಮಾಡಿ ನಂತರ ಉಳಿತಾಯದಲ್ಲಿ ತೊಡಗುತ್ತಾರೆ. ಖರ್ಚೆಲ್ಲಾ ಕಳೆದು ಉಳಿಯುವ ಅಲ್ಪ ಸ್ವಲ್ಪ ಹಣದಲ್ಲಿ ಹೆಚ್ಚು ಉಳಿತಾಯ ಮಾಡಲಾಗುವುದಿಲ್ಲ. ನಮಗೆ ಕಡಿಮೆ ಸಂಬಳ ಅದಕ್ಕೆ ಸರಿಯಾಗಿ ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹಲುಬುವವರೆ ಹೆಚ್ಚು. ಸಂಬಳ ಎಷ್ಟೇ ಇದ್ದರೂ ಉಳಿತಾಯ ಮಾಡುವುದು ಹೇಗೆ, ಗೊತ್ತಾ?

ತಿಂಗಳ ಸಂಬಳದಲ್ಲಿ ಮನೆಗೆ ಅಗತ್ಯವಾಗಿ ಖರ್ಚು ಬರುವ ಅಂಶಗಳನ್ನು ಮೊದಲು ಪಟ್ಟಿ ಮಾಡಿ.

ಬಾಡಿಗೆ, ಶಾಲಾ ಫೀ, ಹಾಲು, ತರಕಾರಿ, ಪೆಟ್ರೋಲ್, ಮೊಬೈಲ್ ರೀಚಾರ್ಜ್ ಇವೆಲ್ಲಾ ಅತಿ ಅಗತ್ಯ ಇರುವ ಖರ್ಚುಗಳು ಮತ್ತು ಇದನ್ನು ಮುಂದೂಡಲು ಸಾಧ್ಯವಿಲ್ಲ.

ನಿಮ್ಮ ಪಟ್ಟಿಯಲ್ಲಿ ಅತಿ ಮುಖ್ಯವಾದ ಆದ್ಯತೆಯ ಖರ್ಚು ಹಾಗೂ ಹೆಚ್ಚುವರಿ ಖರ್ಚ್ ಎಂದು ಎರಡು ಕಾಲಂ ಮಾಡಿಕೊಂಡು ಆದಷ್ಟು ಹೆಚ್ಚುವರಿ ಖರ್ಚನ್ನು ತಗ್ಗಿಸಿ.

ಹೆಚ್ಚುವರಿ ಖರ್ಚುಗಳನ್ನು ಮುಂದೂಡಲು ಸಾಧ್ಯವೇ ಎಂಬುದನ್ನು ಆಲೋಚಿಸಿ.

ಮನೆಗೆ ಅಗತ್ಯ ಇರುವ ವಸ್ತುಗಳನ್ನು ಖರೀದಿಸುವಾಗ ಒಳ್ಳೆಯ ಕಂಡೀಷನ್ನಲ್ಲಿ ಇರುವ, ಮರುಬಳಕೆ ಮಾಡಬಹುದಾದ ವಸ್ತು ಖರೀದಿಸಬಹುದೇ ಯೋಚಿಸಿ.

ದೂರದ ಪ್ರಯಾಣ ಮಾಡುವಾಗ ಸಾರ್ವಜನಿಕ ವಾಹನವನ್ನು ಆಶ್ರಯಿಸಿ.

ಉಳಿತಾಯಕ್ಕೆಂದು ಇಟ್ಟ ಹಣವನ್ನು ಅವಧಿಗೂ ಮುನ್ನ ಹಿಂಪಡೆಯಬೇಡಿ.

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಬಹಳ ದುಬಾರಿ ವಿಷಯವೇ ಸರಿ. ನಿಮ್ಮ ಮತ್ತು ಕುಟುಂಬದವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read