ಬೆಂಗಳೂರು: ನಾಡಿನ ಪ್ರಮುಖ ದೇಗುಲಗಳಿಗೆ ಬರುವ ಭಕ್ತರಿಗೆ ಅನುಕೂಲವಾಗುವಂತೆ ಮಾಹಿತಿಗೆ ಕಾಲ್ ಸೆಂಟರ್ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ.
ಧಾರ್ಮಿಕ ದತ್ತೆ ಇಲಾಖೆಯ ದೇವಾಲಯಗಳಿಗೆ ಬರುವ ಭಕ್ತರಿಗೆ ಮಾಹಿತಿ ಇಲ್ಲದೇ ತೊಂದರೆಯಾಗುತ್ತಿದ್ದು, ಅವರಿಗೆ ಅನುಕೂಲವಾಗುವಂತೆ ಪೂಜಾ ಸಮಯ, ವಿಶೇಷತೆ, ಕೊಠಡಿಗಳ ಲಭ್ಯತೆ ಮೊದಲಾದ ಮಾಹಿತಿಯನ್ನು ತಿಳಿಸುವ ಕಾಲ್ ಸೆಂಟರ್ ತೆರೆಯಲು ಧಾರ್ಮಿಕ ದತ್ತಿ ಇಲಾಖೆ ಮುಂದಾಗಿದೆ.
ಆನ್ಲೈನ್ ವೆಬ್ಸೈಟ್ ಗಳ ಮೂಲಕ ಕೊಠಡಿ ಲಭ್ಯತೆ, ಪೂಜಾ ಸೇವೆಗಳನ್ನು ಕಾಯ್ದಿರಿಸಬಹುದು. ಆದರೆ, ಈ ಮೂಲಕ ದೇವಾಲಯಗಳಲ್ಲಿ ಪೂಜಾ ಸಮಯ, ಕೊಠಡಿ ಕಾಯ್ದಿರಿಸಲು ಅನೇಕರಿಗೆ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಲ್ ಸೆಂಟರ್ ತೆರೆಯಲು ಧಾರ್ಮಿಕ ದತ್ತಿ ಇಲಾಖೆ ಮುಂದಾಗಿದೆ. ಈ ಮೂಲಕವೇ ಭಕ್ತರು ಅಗತ್ಯ ಮಾಹಿತಿಗಳನ್ನು ಪಡೆಯಬಹುದು. ಪೂಜಾ ಸಮಯ, ಕೊಠಡಿ ಲಭ್ಯತೆ ಸೇವೆಗಳ ಮಾಹಿತಿ ಪಡೆಯಬಹುದು ಎಂದು ಹೇಳಲಾಗಿದೆ.