ಕಾಸರಗೋಡು: ತಡರಾತ್ರಿವರೆಗೂ ಮೊಬೈಲ್ ನೋಡಬೇಡ ಎಂದು ಬುದ್ಧಿ ಹೇಳಿದ ತಾಯಿಯನ್ನೇ ಪುತ್ರ ಕೊಲೆ ಮಾಡಿದ ಘಟನೆ ನೀಲೇಶ್ವರಂ ಕಣಿಚಿರದಲ್ಲಿ ನಡೆದಿದೆ.
ತಾಯಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪುತ್ರ ಕೊಲೆ ಮಾಡಿದ್ದಾನೆ. ರುಕ್ಮಿಣಿ(63) ಕೊಲೆಯಾದವರು. ಅವರ ಪುತ್ರ ಸುಜಿತ್ ಕೊಲೆ ಆರೋಪಿಯಾಗಿದ್ದಾನೆ. ಬುಧವಾರ ರಾತ್ರಿ ಮಧ್ಯೆ ಸೇವನೆ ಮಾಡಿದ್ದ ಸುಜಿತ್ ಮೊಬೈಲ್ ನೋಡುತ್ತಿದ್ದ. ಮಧ್ಯರಾತ್ರಿಯವರೆಗೂ ಮೊಬೈಲ್ ನೋಡಬೇಡ ಎಂದು ತಾಯಿ ಬುದ್ದಿವಾದ ಹೇಳಿದ್ದಾರೆ.
ಇದರಿಂದ ಕೋಪಗೊಂಡ ಆತ ದೊಣ್ಣೆಯಿಂದ ರುಕ್ಮಿಣಿ ತಲೆಗೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ರುಕ್ಮಿಣಿ ಅವರನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆರೋಪಿ ಮಾನಸಿಕ ರೋಗಿಯಾಗಿದ್ದು, ಚಿಕಿತ್ಸೆಗೆ ಕುದಿರವಟ್ಟಂ ಮಾನಸಿಕ ಕೇಂದ್ರಕ್ಕೆ ದಾಖಲಿಸಲು ನ್ಯಾಯಾಲಯ ನಿರ್ದೇಶಿಸಿದೆ.