ವಾಷಿಂಗ್ಟನ್: ಅನೇಕ ವರ್ಷಗಳಿಂದ ಕಾಯುತ್ತಿದ್ದ ಲಕ್ಷಾಂತರ ಭಾರತೀಯರಿಗೆ ಅಮೆರಿಕದಿಂದ ಸಿಹಿ ಸುದ್ದಿ ಸಿಕ್ಕಿದೆ. ಅಮೆರಿಕದ ಕಾಯಂ ನಿವಾಸಿ ಅಥವಾ ನಾಗರೀಕನಾಗಲು ನೀಡುತ್ತಿದ್ದ ಗ್ರೀನ್ ಕಾರ್ಡ್ ಬದಲಿಗೆ ಐದು ವರ್ಷಗಳ ಕಾಲ ಅಮೆರಿಕದಲ್ಲಿ ಉದ್ಯೋಗ ಮಾಡಲು ಅವಕಾಶ ನೀಡುವ ಉದ್ಯೋಗ ಪರವಾನಿಗೆ ಕಾರ್ಡ್ ಗಳನ್ನು ವಿತರಿಸಲು ಅಮೆರಿಕ ಸರ್ಕಾರ ನಿರ್ಧರಿಸಿದೆ.
ಈ ಉದ್ಯೋಗ ಕಾರ್ಡ್ ಐದು ವರ್ಷಗಳ ಮಾನ್ಯತೆ ಹೊಂದಿರುತ್ತದೆ. ಅಮೆರಿಕದಲ್ಲಿ ಕೆಲಸ ಮಾಡಲು ಅಧಿಕಾರ ನೀಡಲಿದೆ. ನಂತರ ಮತ್ತೆ ಉದ್ಯೋಗ ಕಾರ್ಡ್ ನವೀಕರಣ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ಗ್ರೀನ್ ಕಾರ್ಡ್ ಗಾಗಿ ಕಾಯುತ್ತಿರುವವರ ಸಂಖ್ಯೆಯನ್ನು ಕಡಿಮೆ ಮಾಡಲು ಅಮೆರಿಕ ಸರ್ಕಾರ ಮುಂದಾಗಿದೆ. ಭಾರತದಿಂದ ಗ್ರೀನ್ ಕಾರ್ಡ್ ಗಾಗಿ ಕಾಯುತ್ತಿರುವ 11 ಲಕ್ಷ ಜನರಿಗೆ ಇದರಿಂದ ಅನುಕೂಲವಾಗಲಿದೆ. ಉದ್ಯೋಗ ಕಾರ್ಡ್ ಪಡೆದವರಿಗೆ ಮುಂದಿನ್ ದಿನಗಳಲ್ಲಿ ಗ್ರೀನ್ ಕಾರ್ಡ್ ನೀಡಿದಲ್ಲಿ ಆ ಸೌಲಭ್ಯವನ್ನು ಕೂಡ ಪಡೆಯುವ ಅವಕಾಶವಿದೆ ಎಂದು ಹೇಳಲಾಗಿದೆ.