ಬೆಂಗಳೂರು: ದೇಶಿಯ ವಿಮಾನಯಾನ ಸಂಸ್ಥೆ ಆಕಾಸ ಏರ್ ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದೆ. ಬೆಂಗಳೂರಿನಿಂದ ಚೆನ್ನೈ, ಹೈದರಾಬಾದ್ ಗೆ ಹಾರಾಟವನ್ನು ಸ್ಥಗಿತಗೊಳಿಸಿದೆ. ಇದರಿಂದಾಗಿ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ.
ಆಕಾಸ್ ಏರ್ ಗೆ ನಾಗರಿಕ ವಿಮಾನಯಾನ ಪ್ರಾಧಿಕಾರ ಅರೇಬಿಯಾ, ಕುವೈತ್, ಕತಾರ್ ಗೆ ಸೇವೆ ಕಲ್ಪಿಸಲು ಅನುಮತಿ ನೀಡಿದೆ. ಆದರೂ ಕೆಲ ಕಾರಣಾಂತರ ಸಂಕಷ್ಟಕ್ಕೆ ಸಿಲುಕಿರುವ ಆಕಾಸ್ ಏರ್ ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದರಾಬಾದ್ ವಿಮನ ಹಾರಾಟ ಸೇವೆಯನ್ನು ರದ್ದು ಮಾಡಿದೆ.
ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದರಾಬಾದ್ ಮಾರ್ಗವಾಗಿ ಆಕಾಶ್ ಏರ್ ನಲ್ಲಿ ಹಲವು ಪ್ರಯಾಣಿಕರು ಈ ಹಿಂದೆಯೇ ಟಿಕೆಟ್ ಬುಕ್ ಮಾಡಿದ್ದರು. ಆದಾಗ್ಯೂ ಆಕಾಸ ಏರ್ ಸಂಸ್ಥೆ ಏಕಾಏಕಿ ಈ ಮಾರ್ಗದ ವಿಮನ ಹಾರಾಟ ರದ್ದುಗೊಳಿಸಿರುವುದಾಗಿ ತಿಳಿಸಿದೆ. ಇನ್ನು ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರಿಗೆ ಹಣವನ್ನು ಹಿಂತಿರುಗಿಸುವುದಾಗಿ ಹೇಳಿದೆ.
ಈ ನಡುವೆ ಕೆಲ ಪ್ರಯಾಣಿಕರಿಗೆ ಟಿಕೆಟ್ ಹಣ ಅರ್ಧದಷ್ಟು ಮಾತ್ರ ಬಂದಿದೆ. ಇನ್ನು ಕೆಲವರಿಗೆ ಟಿಕೆಟ್ ಹಣ ಈವರೆಗೂ ವಾಪಸ್ ಆಗಿಲ್ಲ ಎಂದು ತಿಳಿದುಬಂದಿದೆ.