ಇಸ್ರೇಲ್ : ಇಸ್ರೇಲ್ ಹಾಗೂ ಹಮಾಸ್ ನಡುವಿನ ಯುದ್ಧ ತೀವ್ರಗೊಂಡಿದ್ದು, ಇಸ್ರೇಲ್ ಸೇನೆಯ ದಾಳಿಯಿಂದಾಗಿ 1,500 ಉಗ್ರರು ಹತ್ಯೆುಯಾಗಿದ್ದಾರೆ ಎಂದು ಇಸ್ರೇನ್ ಸೇನೆ ಅಧಿಕೃತವಾಗಿ ಮಾಹಿತಿ ನೀಡಿದೆ.
ಗಾಝಾ ಮೂಲದ ಫೆಲೆಸ್ತೀನ್ ಉಗ್ರಗಾಮಿ ಗುಂಪು ಹಮಾಸ್ ಶನಿವಾರ ಇಸ್ರೇಲ್ ಮೇಲೆ ತ್ರಿವಳಿ ದಾಳಿ ನಡೆಸಿದ ನಂತರ ಇಸ್ರೇಲ್ ಪ್ರತಿದಾಳಿ ನಡೆಸಿದ್ದು, ಗಾಜಾಪಟ್ಟಿ ಸುತ್ತಾಮುತ್ತ 1,500 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.
ಯುದ್ಧ ಘೋಷಣೆಯು ಹಮಾಸ್ ವಿರುದ್ಧ “ಗಮನಾರ್ಹ ಮಿಲಿಟರಿ ಕ್ರಮಗಳನ್ನು” ತೆಗೆದುಕೊಳ್ಳಲು ಇಸ್ರೇಲ್ಗೆ ಹಸಿರು ನಿಶಾನೆ ತೋರಿತು, ನಂತರ ಸೈನ್ಯವು ಸುಮಾರು 300,000 ಸೈನಿಕರನ್ನು ಕರೆಸಿತು. ಈ ದಾಳಿಗೆ ಪ್ರತ್ಯುತ್ತರವಾಗಿ, ಇಸ್ರೇಲ್ ಬೃಹತ್ ವೈಮಾನಿಕ ಕಾರ್ಯಾಚರಣೆಯನ್ನು ಪ್ರಾರಂಭಿಸಿತು,1,500 ಉಗ್ರರನ್ನು ನಿರ್ಮೂಲನೆ ಮಾಡಿದೆ ಎಂದು ಹೇಳಿಕೊಂಡಿದೆ.
ಗಾಝಾ ಪಟ್ಟಿಯ ಸುತ್ತಮುತ್ತ ಇಸ್ರೇಲ್ನಲ್ಲಿ ಸುಮಾರು 1,500 ಹಮಾಸ್ ಉಗ್ರರ ಶವಗಳು ಪತ್ತೆಯಾಗಿವೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.