HomeIndiaರಾಹುಲ್ ಗಾಂಧಿ ‘ಒಳ್ಳೆಯ ನಾಯಕ’; ಆದರೆ ‘ಉತ್ತಮ ವಾಗ್ಮಿ ಅಲ್ಲ’: ಕಾಂಗ್ರೆಸ್ ಮುಖಂಡನ ಹೇಳಿಕೆ

ರಾಹುಲ್ ಗಾಂಧಿ ‘ಒಳ್ಳೆಯ ನಾಯಕ’; ಆದರೆ ‘ಉತ್ತಮ ವಾಗ್ಮಿ ಅಲ್ಲ’: ಕಾಂಗ್ರೆಸ್ ಮುಖಂಡನ ಹೇಳಿಕೆ

ಪುಣೆ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು “ಅರ್ಹ ನಾಯಕ” ಆದರೆ “ಉತ್ತಮ ವಾಗ್ಮಿ ಅಲ್ಲ” ಎಂದು ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಕಾಂಗ್ರೆಸ್‌ನ ವಿಜಯ್ ವಾಡೆತ್ತಿವಾರ್ ಸೋಮವಾರ ಹೇಳಿದ್ದಾರೆ.

ನೀವು ರಾಜಕೀಯದಲ್ಲಿ ಉತ್ತಮ ವಾಗ್ಮಿಯಾಗುವುದು ಮುಖ್ಯ. ರಾಹುಲ್‌ ಗಾಂಧಿ ಒಬ್ಬ ಅರ್ಹ ನಾಯಕ. ಆದರೆ, ಅವರು ಉತ್ತಮ ವಾಗ್ಮಿ ಅಲ್ಲ. ಮೊದಲು ಉತ್ತಮ ವಾಗ್ಮಿಯಾಗಬೇಕು. ಜನರ ಮುಂದೆ ಮಾತನಾಡಬೇಕಾದಾಗಲೆಲ್ಲ ಉದಾಹರಣೆಗಳನ್ನು ನೀಡಿ ಮಾತನಾಡಬೇಕು’ ಎಂದು ವಡೆತ್ತಿವಾರ್ ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಂಐಟಿ ವರ್ಲ್ಡ್ ಪೀಸ್ ವಿಶ್ವವಿದ್ಯಾನಿಲಯದಲ್ಲಿ ಸ್ಕೂಲ್ ಆಫ್ ಗವರ್ನೆನ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ರಾಜಕೀಯದಲ್ಲಿ ಉತ್ತಮ ವಾಗ್ಮಿಗಳ ಪ್ರಾಮುಖ್ಯತೆಯನ್ನು ವಿವರಿಸುವಾಗ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಹಿರಿಯ ನಾಯಕರು ರಾಜಕೀಯದಲ್ಲಿ ಯುವ ಪೀಳಿಗೆಗೆ ಅವಕಾಶ ನೀಡಬೇಕು ಎಂದು ಹೇಳಿದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular