BIG NEWS: ಮಾಜಿ ಪ್ರಧಾನಿ ದೇವೇಗೌಡರ ದೈವ ಭಕ್ತಿಗೆ ಭಾರಿ ಮೆಚ್ಚುಗೆ

ಮಾಜಿ ಪ್ರಧಾನಿ ದೇವೇಗೌಡರು ಅಪಾರ ದೈವ ಭಕ್ತರು. ನಾಡಿನ ದೇವಾಲಯಗಳು ಮಾತ್ರವಲ್ಲದೆ, ದೇಶದ ವಿವಿಧ ದೇವಾಲಯಗಳಿಗೆ ಅವರು ಭೇಟಿ ನೀಡಿದ್ದಾರೆ.

ಪೂಜೆ, ಹೋಮ. ವ್ರತಾಚರಣೆಗಳಲ್ಲಿ ದೇವೇಗೌಡರ ಕುಟುಂಬ ಶ್ರದ್ಧೆ, ಭಕ್ತಿ ಹೊಂದಿದೆ. ದೇವೇಗೌಡರು ಬಿಡುವಿನ ವೇಳೆಯಲ್ಲಿ ಶ್ಲೋಕ ಓದುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರ ದೈವ ಭಕ್ತಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಫೇಸ್ ಬುಕ್ ನಲ್ಲಿ ಸದಾಶಿವ ಎಂ. ಬಾಲಕೃಷ್ಣ ಅವರು ಹಾಕಿರುವ ದೇವೇಗೌಡರ ಶ್ರದ್ಧಾ ಭಕ್ತಿ ಕುರಿತಾದ ಪೋಸ್ಟ್ ಗೆ ಭಾರಿ ಪ್ರತಿಕ್ರಿಯೆ ಬಂದಿದೆ. ಅದರ ಪೂರ್ಣ ವಿವರ ಇಲ್ಲಿದೆ.

“ದೇವರ ಬಗ್ಗೆ ಶೃದ್ದೆ ಭಕ್ತಿ, ನಿಜ ಅರ್ಥದಲ್ಲಿ ಧರ್ಮಾಚಾರಣೆಯ ಮಾದರಿಯನ್ನು ಮತ್ತೊಮ್ಮೆ ಕಣ್ಣಾರೆ ಕಂಡ ನನಗೆ ಧರ್ಮ, ಹಿಂದುತ್ವ ಗಳ ಹೊಸ ವ್ಯಾಖ್ಯಾನ ಕಂಡು ಬಂದದ್ದು ಇಂದು ಮುಂಜಾನೆ 6ಘಂಟೆಗೆ ಕುಕ್ಕೆ ಸುಬ್ರಮಣ್ಯ ದಲ್ಲಿ..

ಇಂದು ಅಶ್ಲೇಷ ನಕ್ಷತ್ರ.4 ದಿನಗಳ ಹಿಂದೆ ಮಾಜಿ ಪ್ರಧಾನಿಗಳು ನನಗೆ ಫೋನಾಯಿಸಿ ಪೂಜೆಗೆ ವ್ಯವಸ್ಥೆ ಮಾಡು, ಬರುತ್ತೇನೆ ಎಂದು ಸೂಚಿಸಿದ್ದರು. ಅವರ ಪ್ರವಾಸ ಕಾರ್ಯಕ್ರಮ ದಂತೆ ಭಾನುವಾರ ಸಂಜೆ 3.30 ಕ್ಕೆ ಹೆಲಿ ಕಾಪ್ಟರ್ ಮೂಲಕ ಬರಬೇಕಿತ್ತು. ಪ್ರತಿಕೂಲ ಹವಾಮಾನ ದಿಂದಾಗಿ ಸಕ್ಲೇಶಪುರ ದಿಂದ ವಾಪಸ್ ಹೋಗಬೇಕಾಯಿತು. ಎಚ್. ಏ. ಎಲ್ ವಿಮಾನ ನಿಲ್ದಾಣಕ್ಕೆ ಹಿಂತಿರುಗಿದ ದೇವೇ ಗೌಡ ದಂಪತಿಗಳು ಮತ್ತೆ 8.30ರ ವಿಮಾನವೇರಿ 10 ಘಂಟೆ ರಾತ್ರಿ ಮಂಗಳೂರು ತಲುಪಿ 1.30 ಕ್ಕೆ ಕುಕ್ಕೆ ಗೆ ಬಂದರು.6 ಘಂಟೆಗೆ ಮತ್ತೆ ಸ್ನಾನ ಮುಗಿಸಿ ಪೂಜೆಗೆ ಹೊರಟು ಕಾರ್ ನಲ್ಲಿ ಕುಳಿತು ಚನ್ನಮ್ಮ ರನ್ನು ನಿರೀಕ್ಷಿಸುತ್ತಿರುವ 10 ನಿಮಿಷ ಕಾಲ ವನ್ನು ವ್ಯರ್ಥ ಮಾಡದೆ ತನ್ನ ಬಳಿ ಇದ್ದ ಸುಬ್ರಮಣ್ಯ ಶ್ಲೋಕ, ಪ್ರಾರ್ಥನೆಗಳ ಕಿರು ಹೊತ್ತಿಗೆ ತೆರೆದು ವಾಚಿಸ ತೊಡಗಿದರು. ಜಾತ್ಯತೀತ ಅಂದರೆ  ನಾಸ್ತಿಕತೆ ಅಲ್ಲ, ಹಿಂದುತ್ವ ಅಂದರೆ ಶೃದ್ದೆ ಭಕ್ತಿಯ ಪರಾಕಾಷ್ಟೇ. ಕಾರ್ ನಲ್ಲಿ ಕುಳಿತು ಶ್ಲೋಕ ಓದುವ ಚಿತ್ರ”

https://m.facebook.com/story.php?story_fbid=pfbid02nP61s7SpANNpmkwKs8AJKhc99d9PXDRyHvV44Kj25tFH1yvSF6pcMKxSFuVTBS8Yl&id=100019150364727&sfnsn=wiwspwa&mibextid=6aamW6

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read