ಹುಟ್ಟುಹಬ್ಬದ ಸಂಭ್ರಮದಲ್ಲಿ ಯೋಗರಾಜ್ ಭಟ್

Yogaraj Bhat - Public TV

ವಿಭಿನ್ನ ಶೈಲಿಯ ಹಾಡುಗಳನ್ನು ಬರೆಯುವ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದಿರುವ ಯೋಗರಾಜ್ ಭಟ್ ಇಂದು ತಮ್ಮ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ನಿರ್ದೇಶನ ಸೇರಿದಂತೆ ನಿರ್ಮಾಪಕರಾಗಿ ಹಾಗೂ ಹಾಡು ಬರಹಗಾರರಾಗಿ ಸಾಕಷ್ಟು ಹೆಸರು ಮಾಡಿದ್ದಾರೆ. 2001ರಲ್ಲಿ ‘ಚಕ್ರ’ ಎಂಬ ಚಿತ್ರದ ಮೂಲಕ ನಿರ್ದೇಶನಕ್ಕಿಳಿದರು. ಮಣಿ, ರಂಗ ಎಸ್​ಎಸ್​ಎಲ್​ಸಿ, ‘ಮುಂಗಾರು ಮಳೆ’ ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಬಹುಬೇಡಿಕೆಯ ನಿರ್ದೇಶಕರಾದರು.

ಯೋಗರಾಜ್ ಭಟ್ ಕಳೆದ ವರ್ಷ ‘ಗಾಳಿಪಟ 2’ ಚಿತ್ರವನ್ನು ನಿರ್ದೇಶಿಸಿದ್ದರು. ಇತ್ತೀಚಿಗೆ ‘ಸೌತ್ ಇಂಡಿಯನ್ ಹೀರೋ’ ಎಂಬ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ಯೋಗರಾಜ್ ಭಟ್ ಅವರಿಗೆ ಸ್ಯಾಂಡಲ್ವುಡ್ ನ ಹಲವಾರು ಕಲಾವಿದರು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read