ಹಮಾಸ್ ಗಾಜಾ ಪಟ್ಟಿಯಿಂದ ಇಸ್ರೇಲ್ ಕಡೆಗೆ ರಾಕೆಟ್ ದಾಳಿ ನಡೆಸಿದ ನಂತರ ಮೇಯರ್ ಸೇರಿದಂತೆ ಆರು ಜನರು ಮೃತಪಟ್ಟು, ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಗಾಝಾ ಪಟ್ಟಿಯಲ್ಲಿರುವ ಫೆಲೆಸ್ತೀನ್ ಸಶಸ್ತ್ರ ಗುಂಪಿನ ವಿರುದ್ಧ ಇಸ್ರೇಲ್ ಪ್ರತಿದಾಳಿ ಆರಂಭಿಸಿದೆ. ಗಾಝಾದಿಂದ ಕ್ಷಿಪಣಿಗಳು ಇಸ್ರೇಲಿ ಭೂಪ್ರದೇಶಗಳ ಮೇಲೆ ದಾಳಿ ನಡೆಸುತ್ತಿದ್ದಂತೆ ಇಸ್ರೇಲ್ ‘ಯುದ್ಧ ಸ್ಥಿತಿ’ ಘೋಷಿಸಿದೆ ಎಂದು ವರದಿಯಾಗಿದೆ. ಇಸ್ರೇಲ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತನ್ನ ಜನರಿಗೆ ಜಾಗರೂಕರಾಗಿರಲು, ಅನಗತ್ಯ ಚಲನೆಯನ್ನು ತಪ್ಪಿಸಲು ಮತ್ತು ಸುರಕ್ಷತಾ ಆಶ್ರಯಗಳಿಗೆ ಹತ್ತಿರದಲ್ಲಿರಲು ಸಲಹೆ ನೀಡಿದೆ.
ಗಾಜಾದ ಅನೇಕ ಸ್ಥಳಗಳಿಂದ ಬೆಳಿಗ್ಗೆ 06:30 ಕ್ಕೆ (0330 ಜಿಎಂಟಿ) ರಾಕೆಟ್ ದಾಳಿಯನ್ನು ಪ್ರಾರಂಭಿಸಲಾಯಿತು ಎಂದು ಎಎಫ್ಪಿ ಪತ್ರಕರ್ತ ವರದಿ ಮಾಡಿದ್ದಾರೆ. ಇಸ್ರೇಲಿ ಸೇನೆಯು ದೇಶದ ದಕ್ಷಿಣ ಮತ್ತು ಕೇಂದ್ರ ಪ್ರದೇಶಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸೈರನ್ ಗಳ ಬಗ್ಗೆ ಎಚ್ಚರಿಕೆ ನೀಡಿದೆ.