ಮೂಡುಬಿದಿರೆ : ನಾಳೆ, ನಾಡಿದ್ದು ( ಅ.6 ಹಾಗೂ 7) ಆಳ್ವಾಸ್ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, 200 ಕ್ಕೂ ಅಧಿಕ ಕಂಪನಿಗಳು ಭಾಗವಹಿಸಲಿದೆ.
ಆಳ್ವಾಸ್ ಪ್ರಗತಿ 2023ರಲ್ಲಿ ಈವರೆಗೆ 165 ಕಂಪೆನಿಗಳು ನೋಂದಾಯಿಸಿಕೊಂಡಿದ್ದು, ಹೆಚ್ಚುವರಿಯಾಗಿ 37 ಕಂಪೆನಿಗಳು ಉದ್ಯೋಗಾವಕಾಶ ನೀಡಲಿದೆ. 200 ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಮೂಡುಬಿದಿರೆಯ ಆಳ್ವಾಸ್ ವಿದ್ಯಾಗಿರಿ ಆವರಣದಲ್ಲಿ ಉದ್ಯೋಗ ಮೇಳ ನಡೆಯಲಿದ್ದು, ಬುರ್ಜಿಲ್ ಹೋಲ್ಡಿಂಗ್, ದುಬೈನ ಭವಾನಿ ಗ್ರೂಪ್ ಕಂಪನಿ ಸೇರಿದಂತೆ ಹಲವು ಕಂಪನಿಗಳು ಪದವೀಧರರನ್ನು ನೇಮಕ ಮಾಡಿಕೊಳ್ಳಲಿವೆ.
ಐಟಿಐ ವಿದ್ಯಾರ್ಥಿಗಳಿಗೆ 1,682, ವಾಣಿಜ್ಯ ವಿಜ್ಞಾನ ಕಲಾ ಪದವೀಧರರಿಗೆ 3,477ಕ್ಕೂ ಹೆಚ್ಚು ಉದ್ಯೋಗಾವಕಾಶಗಳಿದೆ. ಫಾರ್ಮಾ ಕಂಪನಿಗಳಲ್ಲಿ 303 ಹುದ್ದೆಗಳು, ಕೋರ್ ಐಟಿ ಕಂಪನಿಗಳಲ್ಲಿ 500ಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ 559 ಹುದ್ದೆಗಳು, ಫೈನಾನ್ಸ್ ಕ್ಷೇತ್ರದಲ್ಲಿ 976 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಆಸಕ್ತರು ಆನ್ಲೈನ್ ಮೂಲಕ ನೋಂದಣಿ ಮಾಡಬೇಕಾಗಿದ್ದು, ಹೆಚ್ಚಿನ ಮಾಹಿತಿಗೆ www.alvaspragati.com ವೆಬ್ಸೈಟ್ ವೀಕ್ಷಿಸಬಹುದಾಗಿದೆ. ಅಥವಾ ದೂರವಾಣಿ ಸಂಖ್ಯೆ 9008907716, 9663190590 ಸಂಪರ್ಕಿಸಬಹುದು. https://alvaspragati.com/CandidateRegistrationPage ಮೂಲಕ ನೋಂದಣಿಯನ್ನು ಮಾಡಬಹುದು ಎಂದು ಪ್ರತಿಷ್ಟಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಪ್ರಕಟಣೆ ಹೊರಡಿಸಿದ್ದಾರೆ.