ಬೆಂಗಳೂರು : ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಬದಲಾಗಿ ನೀಡುತ್ತಿರುವ ಹಣ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದ್ದು, ಈಗಾಗಲೇ ಕೆಲವರಿಗೆ ಸೆಪ್ಟೆಂಬರ್ ತಿಂಗಳ ಹಣ ಜಮಾ ಆಗಿದೆ. ಅಲ್ಲದೇ ಈಗ ಅಕ್ಟೋಬರ್ ತಿಂಗಳ ಮೊತ್ತ ಕೂಡ ಜಮೆಯಾಗಬೇಕಾಗಿದೆ.
ಸೆಪ್ಟೆಂಬರ್, ಅಕ್ಟೋಬರ್ ತಿಂಗಳ ಹಣ ಬಂದಿದೆಯೋ ಇಲ್ವೋ ಎಂಬುದನ್ನು ನೀವು ಈ ರೀತಿಯಾಗಿ ಚೆಕ್ ಮಾಡಬಹುದು.
ಚೆಕ್ ಮಾಡುವುದು ಹೇಗೆ..?
1) ಆಹಾರ ಇಲಾಖೆಯ ವೆಬ್ ಸೈಟ್ ಗೆ ಲಾಗಿನ್ ಆಗಬೇಕು
2) ಇದರಲ್ಲಿ ಸ್ಟೇಟಸ್ ಆಫ್ ಡಿಬಿಟಿ ಅನ್ನುವ ಆಯ್ಕೆ ಕಾಣಿಸುತ್ತದೆ. ಅದನ್ನು ಆಯ್ಕೆ ಮಾಡಿ.
3) ನಂತರ ನಿಗದಿತ ಕಾಲಂ ನಲ್ಲಿ ರೇಷನ್ ಕಾರ್ಡ್ ನ ನಂಬರ್ ಕೇಳುತ್ತದೆ, ಅಂದ್ರೆ ಆರ್ ಸಿ ನಂಬರ್ನ್ನು ನಮೂದಿಸಿ
4) ನಂತರ ನಿಮ್ಮ ರೇಷನ್ ಕಾರ್ಡ್ ನ ಮೇಲ್ಬಾಗದಲ್ಲಿ ಕಾಣುವ ಆರ್ ಸಿ ನಂಬರ್ ಅನ್ನು ಇಲ್ಲಿ ನಮೂದಿಸಿ ಮುಂದುವರೆಯಿರಿ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
5) ಮುಂದಿನ ಪುಟದಲ್ಲಿ ನಿಮ್ಮ ಅಕೌಂಟ್ಗ ಗೆ ಹಣ ಜಮಾ ಆಗಿದ್ಯಾ, ಒಂದೊಮ್ಮೆ ಖಾತೆಗೆ ಹಣ ಬರದಿದ್ದಲ್ಲಿ ಅದು ಯಾವ ಕಾರಣಕ್ಕೆ ಕ್ರೆಡಿಟ್ ಆಗಿಲ್ಲ ಎಂಬ ಮಾಹಿತಿ ನಿಮಗೆ ಸಿಗಲಿದೆ.
ಇನ್ನೂ, ಈವರೆಗೂ ಇ-ಕೆವೈಸಿ ಮಾಡಿಸಿಕೊಳ್ಳದೇ ಇರುವ ರಾಜ್ಯದ ಯಾವುದೇ ಪಡಿತರ ಚೀಟಿದಾರರು ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡೆಯಲ್ಲಿ ಇಕೆವೈಸಿ ಕಡ್ಡಾಯವಾಗಿ ಪೂರ್ಣಗೊಳಿಸಿಕೊಳ್ಳಬೇಕು.