ಈ ಸುಂದರ ಮಹಿಳೆಯನ್ನು ಕಾಡ್ತಿದೆ ವಿಚಿತ್ರ ಕಾಯಿಲೆ: ಸ್ನಾನ ಮಾಡುವಂತಿಲ್ಲ, ನೀರನ್ನೂ ಕುಡಿಯುವಂತಿಲ್ಲ !

ಅಮೆರಿಕದ ಮಹಿಳೆಯೊಬ್ಬಳಿಗೆ ವಿಶಿಷ್ಟ ಕಾಯಿಲೆ ಆವರಿಸಿದೆ. ಈ ಕಾಯಿಲೆಯ ಹೆಸರು ಅಕ್ವಾಜೆನಿಕ್ ಉರ್ಟಿಕೇರಿಯಾ, ಅಂದರೆ ನೀರಿನ ಅಲರ್ಜಿ. ಈ ಮಹಿಳೆಯ ಹೆಸರು ಟೆಸ್ಸಾ ಹ್ಯಾನ್ಸೆನ್-ಸ್ಮಿ ಮೇಲೆ ತುರಿಕೆ, ದದ್ದುಗಳು ಉಂಟಾಗುತ್ತವೆ. ಅನೇಕ ಬಾರಿ ಟೆಸ್ಸಾಗೆ ಸ್ನಾನ ಮಾಡಿದ ನಂತರ ಚರ್ಮದ ಮೇಲೆ ದೊಡ್ಡ ಗಾಯಗಳಾಗುತ್ತವೆ. ಸ್ನಾನದ ನಂತರ  ನೆತ್ತಿಯಿಂದ ರಕ್ತ ಸೋರಲು ಪ್ರಾರಂಭಿಸುತ್ತದೆ.

ಟೆಸ್ಸಾ ಈ ಕಷ್ಟಕರ ಪರಿಸ್ಥಿತಿಯನ್ನು ಎದುರಿಸಲು, ಪರಿಹಾರ ಪಡೆಯಲು ಆಸ್ಪತ್ರೆಯಲ್ಲಿ ಹಲವಾರು ದಿನಗಳನ್ನು ಕಳೆದಿದ್ದಾಳೆ. ಈ ಕುರಿತು ಜಾಲತಾಣದಲ್ಲಿ ಬರೆದುಕೊಂಡಿದ್ದಾಳೆ.

ಮೊದಲಿಗೆ ವೈದ್ಯರು ಸೋಪ್, ಶವರ್ ಜೆಲ್, ಕಂಡೀಷನರ್ ಮತ್ತು ಶಾಂಪೂ ಬಳಸದಂತೆ ಸಲಹೆ ನೀಡಿದ್ದರು. ನಂತರ ನೀರು ಕುಡಿಯದಂತೆ ಸೂಚಿಸಿದರು. ಟೆಸ್ಸಾಗೆ ನೀರು ಕುಡಿಯುವುದರಿಂದ ಗಂಟಲು ಮತ್ತು ದೇಹದಲ್ಲಿ ಸುಡುವ ಸಂವೇದನೆ ಉಂಟಾಗುತ್ತದೆ. ಹಾಗಾಗಿ ಆಕೆ ಹಾಲು ಮಾತ್ರ ಕುಡಿಯುತ್ತಾರೆ. ಏಕೆಂದರೆ ಹಾಲಿನಲ್ಲಿರುವ ಕೊಬ್ಬು, ಪ್ರೋಟೀನ್ ಮತ್ತು ಸಕ್ಕರೆಯ ನೀರಿನ ಅಣುಗಳು ಆಕೆಯ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಜೀವಂತವಾಗಿರಲು ಸಾಕಷ್ಟು ಪೋಷಣೆ ದೊರೆಯುತ್ತದೆ.

ಟೆಸ್ಸಾಳ ತಾಯಿ ಕರೆನ್ ಅನೇಕ ಅಪರೂಪದ ಕಾಯಿಲೆಗಳನ್ನು ಕಂಡ ವೈದ್ಯೆ. ಆದರೆ ಮಗಳ ಸ್ಥಿತಿ ನೋಡಿ ಕಂಗಾಲಾಗಿದ್ದಾರೆ. ಮಗಳಿಗೆ ಆಕೆ ಬಯಸಿದ ರೀತಿಯಲ್ಲಿ ಬದುಕಲು ಸಾಧ್ಯವಾಗುತ್ತಿಲ್ಲ ಎಂಬುದು ತಾಯಿಯ ಅಳಲು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read