ಎಲ್ಲಾ ಬಗೆಯ ಸೊಪ್ಪುಗಳಲ್ಲಿ ಅತಿ ವಿಶೇಷವಾದದ್ದು ಸಬ್ಬಸಿಗೆ ಸೊಪ್ಪು. ಕಾರಣ ಇದರ ಆಕಾರ, ರುಚಿ ಬಹಳ ಭಿನ್ನ. ಅಷ್ಟೇ ಅಲ್ಲ ಸಬ್ಬಸಿಗೆ ಸೊಪ್ಪಿನ ಘಮದ ಮುಂದೆ ಯಾವುದು ಸರಿಸಾಟಿ ಅಲ್ಲ. ಇಂತಿಪ್ಪ ಸಬ್ಬಸಿಗೆ ಸೊಪ್ಪು ಹೇರಳವಾಗಿ ನಾರಿನಂಶ, ಕ್ಯಾಲ್ಸಿಯಂ, ಕಬ್ಬಿಣ ಹಾಗೂ ಸಿ ಜೀವಸತ್ವವನ್ನೊಳಗೊಂಡಿದೆ.
ಹಾಗಾಗಿ ಮಲಬದ್ಧತೆ, ಗ್ಯಾಸ್ಟ್ರಿಕ್, ಮಾಯದ ಗಾಯ, ರೋಗ ನಿರೋಧಕತೆ ಎಲ್ಲಕ್ಕೂ ಸಬ್ಬಸಿಗೆ ಸೊಪ್ಪಿನ ಬಳಕೆಯಲ್ಲಿ ಪರಿಹಾರ ಇದೆ.
ಬಾಣಂತಿಯರಲ್ಲಿ ಹಾಲಿನ ಕೊರತೆ ಕಾಡಿದರೂ ನಿಯಮಿತವಾಗಿ ಸಬ್ಬಸಿಗೆ ಸೊಪ್ಪನ್ನು ಉಪಯೋಗಿಸಿದರೆ ಸುಲಭವಾಗಿ ಸಮಸ್ಯೆ ಸರಿಹೋಗುತ್ತದೆ.
ಸಬ್ಬಸಿಗೆ ಸೊಪ್ಪನ್ನು ಪ್ರತಿ ದಿನ ವಿಧದಲ್ಲಿ ಉಪಯೋಗಿಸುವುದು ಹೇಗೆ ?
ಉಪ್ಪಿಟ್ಟು, ರೊಟ್ಟಿ, ನುಚ್ಚಿನುಂಡೆ, ಇಡ್ಲಿ, ಪಲ್ಯ, ಚಟ್ನಿಪುಡಿ ಹೀಗೇ ಪ್ರತಿ ದಿನ ತಯಾರಿಸುವ ಆಹಾರದಲ್ಲಿ ಯಾವುದಾದರೂ ಒಂದು ಹೊತ್ತಿನಲ್ಲಿ ಸಬ್ಬಸಿಗೆ ಸೊಪ್ಪನ್ನು ಬಳಸಿ ಇದರ ಲಾಭ ಪಡೆದುಕೊಳ್ಳಬಹುದು.