ಈಗಂತೂ ರೆಫ್ರಿಜರೇಟರ್ ಇಲ್ಲದ ಮನೆಯೇ ಇಲ್ಲ. ಫ್ರಿಡ್ಜ್ ಈಗ ಅತಿ ಅವ್ಯಕತೆ ಇರುವ ವಸ್ತುಗಳಲ್ಲಿ ಒಂದಾಗಿಬಿಟ್ಟಿದೆ. ಹಾಲು, ತರಕಾರಿ, ಹೂವು, ಆಹಾರ ಪದಾರ್ಥಗಳ ಶೇಖರಣೆ ಇವೆಲ್ಲಕ್ಕೂ ಫ್ರಿಡ್ಜ್ ಬೇಕೇ ಬೇಕು. ಆದರೆ ಅತಿಯಾದ ಫ್ರಿಡ್ಜ್ ಬಳಕೆ ಆರೋಗ್ಯಕ್ಕೂ ಹಾನಿಕಾರಕ ಅನ್ನೋ ಮಾತೂ ಇದೆ.
ಫ್ರಿಡ್ಜ್ ನ ವಿಶೇಷತೆ ಎಂದರೆ ಅದು ಯಾವಾಗಲೂ ಪದಾರ್ಥಗಳನ್ನು ತಣ್ಣಗೆ ಇಡುತ್ತದೆ, ಇದರಿಂದ ಯಾವುದೇ ಪದಾರ್ಥ ಬಹಳ ಬೇಗ ಕೆಡುವುದಿಲ್ಲ. ದೀರ್ಘ ಕಾಲದವರೆಗೆ ಬಾಳಿಕೆ ಬರುತ್ತದೆ ಎಂಬುದು. ಇದೇ ಕಾರಣಕ್ಕಾಗಿ ಕೆಲವರು ಬೇಳೆ ಕಾಳುಗಳನ್ನು ಕಡ್ಡಾಯವಾಗಿ ಫ್ರಿಡ್ಜ್ ನಲ್ಲಿ ಇಡುತ್ತಾರೆ.
ಫ್ರಿಡ್ಜ್ ನಲ್ಲಿ ಕಡ್ಡಾಯವಾಗಿ ಶೀತಕ ಅನಿಲದ ಬಳಕೆ ಇರುತ್ತದೆ. ಈ ಅನಿಲವು ರಾಸಾಯನಿಕ ಅನಿಲವಾಗಿದ್ದು ಫ್ರಿಡ್ಜ್ ನಲ್ಲಿ ಇಟ್ಟ ಎಲ್ಲಾ ಪದಾರ್ಥಗಳು ಈ ರಾಸಾಯನಿಕದ ಸಂಪರ್ಕಕ್ಕೆ ಬಂದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಫ್ರಿಡ್ಜ್ ಬಳಕೆಯನ್ನು ಕಡಿಮೆ ಮಾಡುವುದು ಹೇಗೆ ?
ಇದರ ಬಳಕೆಗೆ ಕಡಿವಾಣ ಹಾಕುವುದು ಅಷ್ಟೇನೂ ಕಷ್ಟ ಅಲ್ಲ. ಹಾಲನ್ನು ದಿನದಲ್ಲಿ ಎರಡು ಮೂರು ಬಾರಿ ಕಾಯಿಸಿದರೆ ಒಡೆಯುವುದಿಲ್ಲ. ಇದರಿಂದ ಹಾಲನ್ನು ಫ್ರಿಡ್ಜ್ ನಲ್ಲಿ ಇಡುವ ಅಗತ್ಯವೇ ಬೀಳುವುದಿಲ್ಲ.
ತರಕಾರಿಯನ್ನು ಕಕೇವಲ ಒಂದೆರಡು ದಿನಗಳಿಗೆ ಬೇಕಾದಷ್ಟೇ ಖರೀದಿಸಿದರೆ ಉತ್ತಮ. ಸಮಯದ ಅಭಾವ ಎಂದು ಒಂದು ವಾರಕ್ಕಾಗುವಷ್ಟು ತರಕಾರಿ ಖರೀದಿಸಿ ತಂದು ಫ್ರಿಡ್ಜ್ ನಲ್ಲಿ ಇಡುವ ಅಭ್ಯಾಸ ತಪ್ಪಿಸಿ.
ಒಂದು ಮಣ್ಣಿನ ತಟ್ಟೆ ಹಾಗೂ ಪಾತ್ರೆ ಖರೀದಿಸಿ. ಮಣ್ಣಿನ ತಟ್ಟೆಯಲ್ಲಿ ನೀರು ಹಾಕಿ, ಅದರ ಮೇಲೆ ಮಣ್ಣಿನ ಪಾತ್ರೆಯೊಳಗೆ ತರಕಾರಿ ಸೊಪ್ಪು ಹಾಕಿಟ್ಟರೆ ದೀರ್ಘ ಸಮಯದವರೆಗೂ ತರಕಾರಿ ಹಾಗೂ ಸೊಪ್ಪು ತಾಜಾತನದಿಂದ ಕೂಡಿರುತ್ತದೆ.
ದೋಸೆ ಅಥವಾ ಇಡ್ಲಿ ಹಿಟ್ಟನ್ನು 3-4 ದಿನಗಳ ವರೆಗೂ ಫ್ರಿಡ್ಜ್ ನಲ್ಲಿ ಇಟ್ಟು ಸೇವಿಸುವ ಬದಲು ದಿಢೀರ್ ಎಂದು ಮಾಡಬಹುದಾದ ನೀರ್ ದೋಸೆ, ರವೆ ಇಡ್ಲಿ ಇಂತಹ ರೆಸಿಪಿಗಳಿಂದ ಆಹಾರದಲ್ಲಿ ತಾಜಾತನ ಕಾಯ್ದುಕೊಳ್ಳಬಹುದು.