ಮಧ್ಯ ರಾತ್ರಿ ಸಿಕ್ಕಿಂನಲ್ಲಿ ಮೇಘ ಸ್ಫೋಟ: ದಿಢೀರ್ ಪ್ರವಾಹದಿಂದ 23 ಸೇನಾ ಸಿಬ್ಬಂದಿ ನಾಪತ್ತೆ

ಗ್ಯಾಂಗ್ ಟಕ್: ಸಿಕ್ಕಿಂನಲ್ಲಿ ಮೇಘಸ್ಪೋಟ ಸಂಭವಿಸಿ ಭಾರಿ ಪ್ರವಾಹ ಉಂಟಾಗಿದ್ದು, 23 ಸೇನಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ.

ಉತ್ತರ ಸಿಕ್ಕಿಂನಲ್ಲಿ ಮೋಡದ ಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹದ ನಂತರ ಕನಿಷ್ಠ 23 ಸೇನಾ ಅಧಿಕಾರಿಗಳು ಕಾಣೆಯಾಗಿದ್ದಾರೆ. ಉತ್ತರ ಸಿಕ್ಕಿಂನ ಲೊನಾಕ್ ಸರೋವರದ ಮೇಲೆ ಹಠಾತ್ ಮೇಘಸ್ಫೋಟವು ಲಾಚೆನ್ ಕಣಿವೆಯ ತೀಸ್ತಾ ನದಿಯಲ್ಲಿ ಹಠಾತ್ ಪ್ರವಾಹಕ್ಕೆ ಕಾರಣವಾಯಿತು.

ಈ ಘಟನೆ ಮಧ್ಯರಾತ್ರಿ 1:30ರ ಸುಮಾರಿಗೆ ನಡೆದಿದೆ. ಕಣಿವೆಯುದ್ದಕ್ಕೂ ಕೆಲವು ಸೇನಾ ಸಂಸ್ಥೆಗಳ ಮೇಲೆ ಪರಿಣಾಮ ಬೀರಿದೆ.

ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು ಸಿಂಗ್ಟಾಮ್ಗೆ ಹಠಾತ್ ಪ್ರವಾಹದ ನಂತರ ಪರಿಸ್ಥಿತಿಯನ್ನು ಅವಲೋಕಿಸಿದರು. ಮೂಲಗಳ ಪ್ರಕಾರ, ಚುಂಗ್‌ತಾಂಗ್ ಅಣೆಕಟ್ಟಿನಿಂದ ಹಠಾತ್ ನೀರು ನುಗ್ಗಿ ಕೆಳಮುಖವಾಗಿ 15-20 ಅಡಿ ಎತ್ತರದವರೆಗೆ ನದಿ ನೀರಿನ ಮಟ್ಟ ಹೆಚ್ಚಳವಾಯಿತು.

ಇದು ಸಿಂಗ್ಟಮ್ ಬಳಿಯ ಬರ್ದಂಗ್‌ನಲ್ಲಿ ನಿಲ್ಲಿಸಲಾಗಿದ್ದ ಸೇನಾ ವಾಹನಗಳಿಗೆ ತೊಂದರೆಯಾಗಿದೆ. 23 ಯೋಧರು ನಾಪತ್ತೆಯಾಗಿದ್ದು, ಸುಮಾರು 41 ಸೇನಾ ವಾಹನಗಳು ಕೂಡ ಕೆಸರಿನಡಿಯಲ್ಲಿ ಮುಳುಗಿವೆ. ಶೋಧ ಕಾರ್ಯಗಳು ನಡೆಯುತ್ತಿವೆ.

ಪ್ರದೇಶದಲ್ಲಿ ಇಂಟರ್ನೆಟ್ ಸಂಪರ್ಕ ಕಡಿಮೆ ಇರುವುದರಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನೆಯು ಕಾರ್ಯಾಚರಣೆಯ ಸವಾಲುಗಳನ್ನು ಎದುರಿಸುತ್ತಿದೆ. ಕಮಾಂಡ್ ಮಟ್ಟದಲ್ಲಿ ಇರುವ ಅಧಿಕಾರಿಗಳು ಸಂಪರ್ಕ ಸಾಧಿಸಲು ಕಷ್ಟಪಡುತ್ತಿದ್ದಾರೆ. ನಾಪತ್ತೆಯಾದವರನ್ನು ರಕ್ಷಿಸುವ ಪ್ರಯತ್ನ ಮುಂದುವರಿದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read