ಮಸಾಲೆಯುಕ್ತ ಆಹಾರ ʼಪೈಲ್ಸ್‌ʼ ಗೆ ಕಾರಣವಾಗಬಹುದೇ ? ಇಲ್ಲಿದೆ ವೈದ್ಯರು ನೀಡುವ ಸಲಹೆ

ವಿಪರೀತ ಮಸಾಲೆಭರಿತ ಆಹಾರ ನಮ್ಮ ಆರೋಗ್ಯಕ್ಕೆ ಅಪಾಯಕಾರಿ. ಹೆಚ್ಹೆಚ್ಚು ಖಾರ ಮತ್ತು ಮಸಾಲೆಬೆರೆತ ತಿನಿಸುಗಳ ಸೇವನೆ ಪೈಲ್ಸ್‌ಗೆ ಕಾರಣವಾಗುತ್ತದೆ ಅಂತಾನೂ ಹೇಳಲಾಗುತ್ತದೆ. ಮಸಾಲೆಯುಕ್ತ ಆಹಾರ ಮೊದಲೇ ಅಸ್ತಿತ್ವದಲ್ಲಿರುವ ಮೂಲವ್ಯಾಧಿಯನ್ನು ಉಲ್ಬಣಗೊಳಿಸುವ ಸಾಧ್ಯತೆಯೂ ಇರುತ್ತದೆ. ಅಷ್ಟೇ ಅಲ್ಲ ಗುದನಾಳದ ಕಾಯಿಲೆಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.

ತಜ್ಞ ವೈದ್ಯರ ಪ್ರಕಾರ ಮಸಾಲೆಯುಕ್ತ ಆಹಾರವು ಅಜೀರ್ಣ ಮತ್ತು ಕೆಲವೊಮ್ಮೆ ತೆಳುವಾದ ಮಲ ಅಥವಾ ಅತಿಸಾರಕ್ಕೆ ಕಾರಣವಾಗಬಹುದು. ಇದು ಕರುಳಿನ ಚಲನೆಗೆ ಸಮಸ್ಯೆ ಉಂಟು ಮಾಡುವ ಸಾಧ್ಯತೆಯೂ ಇರುತ್ತದೆ.

ಪೈಲ್ಸ್‌ಗೆ ಕಾರಣಗಳೇನು ?

ಸಂಶೋಧನೆಯ ಪ್ರಕಾರ ಪೈಲ್ಸ್, ಪುರುಷರು ಮತ್ತು ಮಹಿಳೆಯರಲ್ಲಿ ವ್ಯಾಪಕವಾಗಿ ಹರಡಿದೆ. ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಜನರಿಗೆ 50 ವರ್ಷ ವಯಸ್ಸಿನೊಳಗೆ ಪೈಲ್ಸ್ ಕಾಣಿಸಿಕೊಳ್ಳುತ್ತದೆ. ಪೈಲ್ಸ್‌, ತುರಿಕೆ, ನೋವು ಮತ್ತು ರಕ್ತಸ್ರಾವದಂತಹ ರೋಗಲಕ್ಷಣಗಳನ್ನು ಉಂಟುಮಾಡಬಹುದು.

ಸಂಶೋಧನೆಯ ಪ್ರಕಾರ ಪೈಲ್ಸ್, ಪುರುಷರು ಮತ್ತು ಮಹಿಳೆಯರಲ್ಲಿ ವಿಭಿನ್ನವಾಗಿ ಸಂಭವಿಸುತ್ತದೆ. ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಹೊಟ್ಟೆಯ ಮೇಲೆ ಒತ್ತಡ ಬೀಳುತ್ತದೆ. ಮಸಾಲೆಯುಕ್ತ ಆಹಾರ ಸೇವಿಸುವುದರಿಂದ ಮಲಬದ್ಧತೆ, ಅತಿಸಾರ, ಗರ್ಭಾವಸ್ಥೆಯಲ್ಲಿ ಸಮಸ್ಯೆ, ಬೊಜ್ಜು ಕೂಡ ಉಂಟಾಗುತ್ತದೆ. ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಸಹ ಪೈಲ್ಸ್‌ ಬರುವ ಸಾಧ್ಯತೆ ಇರುತ್ತದೆ.

ಆದರೆ ಮಸಾಲೆಯುಕ್ತ ಆಹಾರಕ್ಕಿಂತ ಹೆಚ್ಚಾಗಿ ಕಳಪೆ ಜೀವನಶೈಲಿ ಮತ್ತು ಕಡಿಮೆ ನೀರು ಕುಡಿಯುವುದರಿಂದ ಹೊಟ್ಟೆಯ ಮೇಲೆ ಒತ್ತಡ ಬೀಳುತ್ತದೆ ಎನ್ನುತ್ತಾರೆ ವೈದ್ಯರು. ಮಸಾಲೆ ಪದಾರ್ಥಗಳನ್ನು ಅತಿಯಾಗಿ ತಿನ್ನುವುದರಿಂದ ಬೇಗನೆ ವೃದ್ಧಾಪ್ಯ ಬರುತ್ತದೆ. ಆದ್ದರಿಂದ ಆಹಾರದಲ್ಲಿ ಗರಿಷ್ಠ ಫೈಬರ್ ಅನ್ನು ಸೇರಿಸಬೇಕು. ಇದು ಕರುಳಿನ ಚಲನೆ, ನಿರಂತರ ಮಲಬದ್ಧತೆ ಅಥವಾ ಅತಿಸಾರ, ಸ್ಥೂಲಕಾಯತೆ ಇಂತಹ ತೊಂದರೆಯನ್ನು ನಿವಾರಿಸುತ್ತದೆ. ಇದರಿಂದ ಪೈಲ್ಸ್‌ ಅಪಾಯ ಕೂಡ ಕಡಿಮೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read