ಮೂವತ್ತು ವರ್ಷಗಳ ಹಿಂದೆ ಇದ್ದ ಜಂಕ್ ಫುಡ್ ಗಳನ್ನ ನೆನಪು ಮಾಡಿಕೊಂಡರೆ ಹುಣಸೇ ಕ್ಯಾಂಡಿ ನೆನಪಾಗಬಹುದು. ಹಾನಿಕಾರಕವಲ್ಲದ ಜಂಕ್ ಇದು. ಹುಣಸೇ ಹಣ್ಣಿನ ಹೆಸರು ಕೇಳಿದರೇ ಸಾಕು ಬಾಯಲ್ಲಿ ನೀರೂರುತ್ತದೆ ಅಲ್ವೇ ? ಹುಣಸೇ ಕ್ಯಾಂಡಿ ಮಾಡೋದು ನೀವು ಮರೆತಿದ್ದರೆ ಇಲ್ಲಿದೆ ಅದರ ರೆಸಿಪಿ.
ಹುಣಸೇ ಹಣ್ಣು – ಒಂದು ಹಿಡಿ
ಜೀರಿಗೆ – ಒಂದು ಚಮಚ
ಖಾರದ ಪುಡಿ – ಅರ್ಧ ಚಮಚ
ಬೆಲ್ಲ – ಸ್ವಲ್ಪ
ಕಲ್ಲುಪ್ಪು – ಸ್ವಲ್ಪ
ವಿಧಾನ
ಮೊದಲು ಜೀರಿಗೆಯನ್ನು ಕುಟಾಣಿಯಲ್ಲಿ ಕುಟ್ಟಿ, ಜೀರಿಗೆ ಸ್ವಲ್ಪ ಪುಡಿ ಆದ ನಂತರ, ಹುಣಸೇ ಹಣ್ಣು, ಅಚ್ಚ ಖಾರದ ಪುಡಿ, ಉಪ್ಪು ಹಾಗೂ ಬೆಲ್ಲ ಸೇರಿಸಿ ಚೆನ್ನಾಗಿ ಎಲ್ಲವೂ ಹೊಂದುವವರೆಗೂ ಕುಟ್ಟಿ ನಂತರ ಐಸ್ ಕ್ರೀಮ್ ಸ್ಟಿಕ್ ನಲ್ಲಿ ಅಂಟಿಸಿ ಲಾಲಿ ಪಾಪ್ ನಂತೆ ಅಂಟಿಸಿ ಕೊಡಿ.