ಬಾಣಸಿಗರು ಅಡುಗೆ ಮಾಡುವಾಗ ಏಪ್ರಾನ್ ಧರಿಸುವುದು ಸಾಮಾನ್ಯ. ಪಾಶ್ಚಾತ್ಯ ಗೃಹಿಣಿಯರು ಅಡುಗೆ ಮನೆಯಲ್ಲಿ ಕಡ್ಡಾಯವಾಗಿ ಇದನ್ನ ಧರಿಸುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಏಪ್ರಾನ್ ನ ಪ್ರಯೋಜನ ಏನು? ಇದನ್ನ ಯಾಕೆ ಧರಿಸಬೇಕು ಅಂತ ನೋಡೋದಾದ್ರೆ……
ದಿನನಿತ್ಯದ ಉಡುಗೆಯ ಮೇಲೆ ಏಪ್ರಾನ್ ಹಾಕಿಕೊಳ್ಳುತ್ತಾರೆ. ಕಾರಣ ನಿತ್ಯ ಧರಿಸೋ ಉಡುಪು ಹಾಳಾಗದೆ ಇರಲಿ ಅಂತ.
ಇದರಿಂದ ಅಡುಗೆ ಮನೆಯ ಕಠಿಣ ಕಲೆಗಳಾದ ಎಣ್ಣೆ, ಮಸಾಲೆ ತಾಗಿ ಕೊಳೆಯಾಗುವುದನ್ನು ತಪ್ಪಿಸಬಹುದು.
ಏಪ್ರಾನ್ ಇಂದ ಮತ್ತೊಂದು ದೊಡ್ಡ ಉಪಯೋಗ ಅಂದರೆ ಬೆಂಕಿಯಿಂದ ರಕ್ಷಣೆ. ಅಡುಗೆ ಮಾಡುವವರು ಸಾಮಾನ್ಯವಾಗಿ ಹತ್ತಿ ಬಟ್ಟೆಗಳನ್ನಷ್ಟೆ ಧರಿಸಬೇಕು ಎಂದಿದೆ.
ಆದರೆ ಎಲ್ಲರೂ ಈ ನಿಯಮ ಪಾಲಿಸುವುದಿಲ್ಲ. ಹತ್ತಿ ಅಲ್ಲದೆ ಬೇರೆ ಯಾವುದೇ ಬಟ್ಟೆ ಧರಿಸಿ ಅಡುಗೆ ಮಾಡುವಾಗ, ಆಕಸ್ಮಿಕ ಅಗ್ನಿ ಅವಘಡ ಉಂಟಾದರೆ ಬೇಗ ಬೆಂಕಿಯ ಸಂಪರ್ಕಕ್ಕೆ ಬರಬಹುದು. ಆದರೆ ಏಪ್ರಾನ್ ಯಾವಾಗಲೂ ಹತ್ತಿ ಬಟ್ಟೆಯದ್ದಾಗಿರುವುದರಿಂದ ಈ ಅಪಾಯ ಇರುವುದಿಲ್ಲ.
ಏಪ್ರಾನ್ ನಲ್ಲಿ ಒಂದು ಚಿಕ್ಕ ಕಿಸೆಯೂ ಇದ್ದು, ಕತ್ತರಿ, ಚಾಕು ಮುಂತಾದ ಅಗತ್ಯ ವಸ್ತುಗಳನ್ನು ಕೈಗೆ ಸಿಗುವ ಹಾಗೆ ಜೊತೆಯಲ್ಲೇ ಇಟ್ಟುಕೊಳ್ಳುಬಹುದು.
ಏಪ್ರಾನ್ ಇಂದ ಇಷ್ಟೆಲ್ಲಾ ಉಪಯೋಗ ಇದ್ದಾಗ ಅದನ್ನು ಬಳಸುವುದಕ್ಕೆ ಹಿಂಜರಿಯುವುದೇಕೆ ಅಲ್ವಾ ?