alex Certify SHOCKING: ಜೈಲಿನಲ್ಲಿ ಜನನಾಂಗವನ್ನೇ ಕತ್ತರಿಸಿಕೊಂಡ ಕೈದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಜೈಲಿನಲ್ಲಿ ಜನನಾಂಗವನ್ನೇ ಕತ್ತರಿಸಿಕೊಂಡ ಕೈದಿ

ಕಟಕ್: ಒಡಿಶಾದ ಭದ್ರಕ್ ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಯೊಬ್ಬ ಶನಿವಾರ ತನ್ನ ಜನನಾಂಗವನ್ನು ಕತ್ತರಿಸಿಕೊಂಡು ಎಡಗೈಗೆ ಗಾಯ ಮಾಡಿಕೊಂಡಿರುವ ಘಟನೆ ನಡೆದಿದೆ.

ನಾಲ್ಕು ದಿನಗಳ ಹಿಂದೆ ತನ್ನ ಪತ್ನಿಗೆ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿ ಜೈಲಿಗೆ ಕರೆತರಲಾದ ವಿಚಾರಣಾಧೀನ ಕೈದಿ ಸುಶಾಂತ್ ಮಾಝಿ ಈ ರೀತಿ ಮಾಡಿಕೊಂಡಿದ್ದಾನೆ.

ಈತನ ವಿರುದ್ಧ ಭದ್ರಕ್ ಜಿಲ್ಲೆಯ ತಿಹಿಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೌಟುಂಬಿಕ ಹಿಂಸಾಚಾರ ಮತ್ತು ಚಿತ್ರಹಿಂಸೆ ಆರೋಪದ ಮೇಲೆ ಅವರ ಪತ್ನಿ ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಅವರನ್ನು ಬಂಧಿಸಲಾಯಿತು. ಬಂಧನದ ನಂತರ, ಸುಶಾಂತ್ ಒತ್ತಡದಲ್ಲಿದ್ದ ಮತ್ತು ಜೈಲಿನ ಇತರ ಕೈದಿಗಳೊಂದಿಗೆ ಮಾತನಾಡುತ್ತಿರಲಿಲ್ಲ.

ಜೈಲಿನ ಅಧಿಕಾರಿಗಳ ಪ್ರಕಾರ, ಶನಿವಾರ ಮಧ್ಯಾಹ್ನ 1.30 ರ ಸುಮಾರಿಗೆ ಮಾಝಿ ಶೌಚಾಲಯಕ್ಕೆ ಹೋಗಿದ್ದ. ಶೌಚಾಲಯದಿಂದ ಹೊರಗೆ ಬರದ ಕಾರಣ ಜೈಲು ಸಿಬ್ಬಂದಿ ಕೂಡಲೇ ಜೈಲು ಅಧೀಕ್ಷಕರಿಗೆ ಮಾಹಿತಿ ನೀಡಿದ್ದಾರೆ. ನಂತರ ತೀವ್ರ ರಕ್ತಸ್ರಾವವಾಗುತ್ತಿದ್ದ ಅವರನ್ನು ಶೌಚಾಲಯದಿಂದ ರಕ್ಷಿಸಲಾಯಿತು.

ಭದ್ರಕ್ ಜಿಲ್ಲಾ ಕಾರಾಗೃಹದ ಅಧೀಕ್ಷಕ ಆರ್.ಎನ್. ನಾಯಕ್ ಅವರು ಮಾಹಿತಿ ನೀಡಿ, ವಿಚಾರಣಾಧೀನ ಕೂದಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದ. ಆದರೆ, ಸಿಬ್ಬಂದಿ ಅವನನ್ನು ರಕ್ಷಿಸಿದರು. ಅವರನ್ನು ಭದ್ರಕ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು, ಅವರ ಸ್ಥಿತಿ ಹದಗೆಟ್ಟಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಟಕ್‌ ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ತಿಳಿಸಿದ್ದಾರೆ.

ಸೊಳ್ಳೆ ಬತ್ತಿ ಸುರುಳಿ ಇಡಲು ಬಳಸುವ ಸ್ಟೀಲ್ ಸ್ಟ್ಯಾಂಡ್ ನಿಂದ ಸುಶಾಂತ್ ತನ್ನ ಜನನಾಂಗ ಮತ್ತು ಕೈಯನ್ನು ಕತ್ತರಿಸಿಕೊಂಡಿದ್ದಾನೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...