ಬೆಂಗಳೂರು: ಪಡಿತರ ಚೀಟಿಯಲ್ಲಿ ತಿದ್ದುಪಡಿ, ಹೊಸ ಸೇರ್ಪಡೆ ಗಡುವು ಮುಕ್ತಾಯವಾಗಿದೆ. ಸಲ್ಲಿಕೆಯಾದ 2.65 ಲಕ್ಷ ಅರ್ಜಿಯಲ್ಲಿ 93,000 ಅರ್ಜಿಗಳು ತಿರಸ್ಕೃತಗೊಂಡಿವೆ.
ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಮಾಹಿತಿ ತಿದ್ದುಪಡಿ, ಹೆಚ್ಚುವರಿ ಫಲಾನುಭವಿಗಳ ಹೆಸರು ಸೇರ್ಪಡೆಗೆ ಆಹಾರ ಇಲಾಖೆ ವತಿಯಿಂದ ನೀಡಿದ್ದ ಗಡುವು ಮುಕ್ತಾಯವಾಗಿದೆ.
ಜುಲೈ 11 ರಿಂದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಹೆಚ್ಚುವರಿ ಅಕ್ಕಿಯ ಮೊತ್ತವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಚಾಲನೆ ನೀಡಿದ್ದು, ಪಡಿತರ ಚೀಟಿಯಲ್ಲಿ ಯಜಮಾನಿ ಯಾರು ಎನ್ನುವ ಗೊಂದಲ ಮತ್ತು ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ಕಳೆದ ತಿಂಗಳು ಪಡಿತರ ಚೀಟಿ ಮಾಹಿತಿ ತಿದ್ದುಪಡಿಗೆ ಅವಕಾಶ ಕಲ್ಪಿಸಿತ್ತು. 2.65 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಆಹಾರ ನಿರೀಕ್ಷಕರು ಪರಿಷ್ಕರಣೆ ಮಾಡಿ 93,000ಕ್ಕೂ ಹೆಚ್ಚು ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಹೇಳಲಾಗಿದೆ.
ಆಗಸ್ಟ್ 20 ರಿಂದ ಸೆಪ್ಟಂಬರ್ 20 ವರೆಗೆ 2,65,581 ಅರ್ಜಿ ಸಲ್ಲಿಕೆಯಾಗಿದೆ. 93,362 ಅರ್ಜಿ ತಿರಸ್ಕೃತಗೊಂಡಿವೆ.