ಆದಾಯ ಮೀರಿ ಆಸ್ತಿ ಗಳಿಸಿದ ತಹಶೀಲ್ದಾರ್ ಮನೆ ಮೇಲೆ ದಾಳಿ ಮಾಡಿದ ಅಧಿಕಾರಿಗಳಿಗೇ ಬಿಗ್ ಶಾಕ್: 2 ಕೋಟಿ ರೂ. ನಗದು, ಕೆಜಿಗಟ್ಟಲೇ ಚಿನ್ನ ಪತ್ತೆ

ಹೈದರಾಬಾದ್: ತೆಲಂಗಾಣದ ನಲಗೊಂಡ ಜಿಲ್ಲೆ ಮರ್ರಿಗೂಡ ತಹಶೀಲ್ದಾರ್ ಮಹೇಂದ್ರ ರೆಡ್ಡಿ ಮನೆಯಲ್ಲಿ ಕೋಟಿಗಟ್ಟಲೇ ಹಣ, ಕೆಜಿಗಟ್ಟಲೇ ಚಿನ್ನಾಭರಣ ಹಣ ಪತ್ತೆಯಾಗಿದೆ.

ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಟ್ರಂಕ್ ನಲ್ಲಿ ಎರಡು ಕೋಟಿಗೂ ಹೆಚ್ಚು ಹಣ, ಕೆಜಿಗಟ್ಟಲೆ ಚಿನ್ನಾಭರಣ ಪತ್ತೆಯಾಗಿದೆ. ತಹಶೀಲ್ದಾರ್ ಮಹೇಂದ್ರ ರೆಡ್ಡಿಗೆ ಸೇರಿದ 15 ಸ್ಥಳಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ದಾಳಿ ಮಾಡಿದಾಗ ಎರಡು ಕೋಟಿಗೂ ಅಧಿಕ ನಗದು ಹಾಗೂ ಕೆಜಿಗಟ್ಟಲೆ ಚಿನ್ನಾಭರಣ ಪತ್ತೆಯಾಗಿದೆ.

ತಹಶೀಲ್ದಾರ್ ನಿವಾಸದಲ್ಲಿ ನೋಟುಗಳ ಬಂಡಲ್ ಗಳು ಪತ್ತೆಯಾಗಿವೆ. ಒಂದು ಟ್ರಂಕ್ ಬಾಕ್ಸ್ ನಲ್ಲಿ ಎರಡು ಕೋಟಿಗೂ ಹೆಚ್ಚು ನಗದು ಪತ್ತೆಯಾಗಿದೆ. ಅಲ್ಲದೆ, ಎಸಿಬಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಕೆಜಿಗಟ್ಟಲೆ ಚಿನ್ನ ಪತ್ತೆಯಾಗಿದೆ. ಮಹೇಂದ್ರ ರೆಡ್ಡಿ ಅವರನ್ನು ಇತ್ತೀಚೆಗೆ ಕಂದುಕೂರಿನಿಂದ ಮರ್ರಿಗೂಡ ಮಂಡಲಕ್ಕೆ ವರ್ಗಾವಣೆ ಮಾಡಲಾಗಿತ್ತು. ತಹಸೀಲ್ದಾರ್ ಮಹೇಂದ್ರ ರೆಡ್ಡಿ ಅವರ ಹುಟ್ಟೂರು ಇಬ್ರಾಹಿಂಪಟ್ಟಣ. ಸದ್ಯ ಎಸಿಬಿ ತನಿಖೆ ಮುಂದುವರೆದಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read