ಬೆಂಗಳೂರು: ಬಿಎಂಟಿಸಿ ಬಸ್ ಕಂಡಕ್ಟರ್ ಮಂಗಳಮುಖಿಯೊಬ್ಬರಿಗೆ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕಂಡಕ್ಟರ್ ವಿರುದ್ಧ ದೂರು ದಾಖಲಾಗಿದೆ.
ಟಿಕೆಟ್ ನೀಡುವ ವಿಚಾರವಾಗಿ ಬಿಎಂಟಿಸಿ ಕಂಡಕ್ಟರ್, ಮಂಗಳಮುಖಿಗೆ ಅಪಮಾನಮಾಡಿ, ನಿಂದಿಸಿದ್ದಾಗಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳಮುಖಿ ಸಾನ್ವಿಕ ಬಿಎಂಟಿಸಿ ಬಸ್ ಕಂಡಕ್ಟರ್ ವಿರುದ್ಧ ದೂರು ನೀಡಿದ್ದಾರೆ.
ಮಾದನಾಯಕನಹಳ್ಳಿ ಬಳಿಯಿಂದ ನೆಲಮಂಗಲ ಟೌನ್ ಗೆ ಬರುತ್ತಿದ್ದಾಗ ಟಿಕೆಟ್ ಖರೀದಿ ವಿಚಾರವಾಗಿ ಕಂಡಕ್ಟರ್ ಕಿರುಕುಳ ನೀಡಿದ್ದಾಗಿ ನೆಲಮಂಗಲ ಟೌನ್ ಠಾಣೆಯಲ್ಲಿ ಸಾನ್ವಿಕ ದೂರು ದಾಖಲಿಸಿದ್ದಾರೆ.