ಖಾಸಗಿ ವಾಹನಗಳ ಮೇಲೆ ‘Police’ ‘Govt of India’, High Court ಸ್ಟಿಕರ್ ಗಳನ್ನು ಬಳಸದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಸಾರಿಗೆ ಹಾಗೂ ಗೃಹ ಇಲಾಖೆಗೆ ಮದ್ರಾಸ್ ಹೈಕೋರ್ಟ್ ಸೂಚನೆ ನೀಡಿದೆ.
ಗೃಹ ಇಲಾಖೆ, ಸಾರಿಗೆ ಇಲಾಖೆ ಮತ್ತು ಪೊಲೀಸ್ ಸೇರಿದಂತೆ ರಾಜ್ಯ ಅಧಿಕಾರಿಗಳು ಖಾಸಗಿ ವಾಹನಗಳಲ್ಲಿ ಲಾಂಛನ, ಭಾರತ ಸರ್ಕಾರ, ತಮಿಳುನಾಡು ಸರ್ಕಾರ, ಹೈಕೋರ್ಟ್, ಪೊಲೀಸ್ ಸೇರಿದಂತೆ ಯಾವುದೇ ಸ್ಟಿಕರ್ ಗಳನ್ನು ಬಳಸದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಸಾರಿಗೆ ಹಾಗೂ ಗೃಹ ಇಲಾಖೆಗೆ ಮದ್ರಾಸ್ ಹೈಕೋರ್ಟ್ ಸೂಚನೆ ನೀಡಿದೆ.
ಧ್ವಜಗಳು, ಲಾಂಛನಗಳು, ಹೆಸರುಗಳು, ಚಿಹ್ನೆಗಳು ಇತ್ಯಾದಿಗಳ ಎಲ್ಲಾ ರೀತಿಯ ಅನಧಿಕೃತ ಬಳಕೆಯನ್ನು ತೆಗೆದುಹಾಕಲು ಸೂಕ್ತ ಸುತ್ತೋಲೆಗಳನ್ನು ಹೊರಡಿಸುವಂತೆ ಹೈಕೋರ್ಟ್ ನ ಏಕ ನ್ಯಾಯಾಧೀಶರು 2022 ರಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಈ ಹಿನ್ನೆಲೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ರಾಜಕಾರಣಿಗಳು ಹಾಗೂ ಅಧಿಕಾರಿಗಳೂ ಕೂಡಾ ತಮ್ಮ ಕುಟುಂಬಕ್ಕೆ ಸೇರಿದ ವೈಯಕ್ತಿಕ ಬಳಕೆಯ ಖಾಸಗಿ ವಾಹನಗಳ ಮೇಲೆ Government Of India ಸ್ಟಿಕ್ಕರ್ ಅಂಟಿಸುತ್ತಿದ್ಧಾರೆ. ಪೊಲೀಸರು ವಾಹನಗಳ ಪರಿಶೀಲನೆಗೆ ತಡೆಯುವುದನ್ನು ತಪ್ಪಿಸಲು ಹಾಗೂ ಇನ್ನಿತರ ಕಾರಣಗಳಿಗೆ ತಮ್ಮ ವಾಹನದ ಬಾನೆಟ್ ಮೇಲೆ ಕೂಡಾ Government Of India ಸ್ಟಿಕ್ಕರ್ಗಳನ್ನು ಅಂಟಿಸಲಾಗುತ್ತಿದೆ ಎಂಬ ಸಾಕಷ್ಟು ದೂರುಗಳು ಬಂದಿದ್ದವು.