`BPL’ ಕಾರ್ಡ್ ದಾರರಿಗೆ ಗುಡ್ ನ್ಯೂಸ್ : ಸಮೀಪ ದೃಷ್ಟಿ ಸಮಸ್ಯೆ ಇರುವವರಿಗೆ ಉಚಿತ ಕನ್ನಡಕ ವಿತರಣೆ

ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸಿಹಿಸುದ್ದಿ, ಸಮೀಪ ದೃಷ್ಟಿ ಇರುವವರಿಗೆ ಅಕ್ಟೋಬರ್ 1 ರಂದು ಉಚಿತ ಕನ್ನಡಕ ವಿತರಣೆ  ಮಾಡಲಾಗುತ್ತಿದೆ.

ದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಅಕ್ಷರಗಳು ಓದಲು ಬರೆಯಲು ಸಾಧ್ಯವಾಗದಿರುವರು, ಕಾಳುಗಳನ್ನು  ಹಸನು ಮಾಡಲು ತೊಂದರೆ ಇರುವವರು, ಸೂಜಿ-ದಾರ ಪೋಣಿಸಲಿಕ್ಕೆ ಆಗದೇ ಇರುವವರಿಗೆ ಮಾತ್ರ ಸಮೀಪ ದೃಷ್ಟಿಗೆ ಸಂಬಂಧಿಸಿದಂತೆ ಉಚಿತ ಕನ್ನಡಕಗಳನ್ನು ದಿನಾಂಕ:01-10-2023 ರಂದು ಬೆಳಿಗ್ಗೆ 09:00 ರಿಂದ 01:00 ಗಂಟೆಗೆಯವರೆಗೆ ಒಂದು ದಿನ ಮಾತ್ರ ಕೊಡಲಾಗುವುದು.

ಫಲಾನುಭವಿಗಳು ಬಿ.ಪಿ.ಎಲ್. ಕಾರ್ಡ್‌ನ ಪ್ರತಿಯನ್ನು ಮತ್ತು ಕನ್ನಡಕ ನಂ. ಇರುವ ಚೀಟಿಯನ್ನು ಕಡ್ಡಾಯವಾಗಿ ತರುವುದು. ಸಂಚಾರಿ ನೇತ್ರ ಚಿಕಿತ್ಸಾ ಘಟಕ, ರೂ.ನಂ. 126 ಚಿಗಟೇರಿ ಜಿಲ್ಲಾ ಆಸ್ಪತ್ರೆ, ದೂರವಾಣಿ ಸಂಖ್ಯೆ:9980969791 ಸಂಪರ್ಕಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read