ಹೌಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಇಂದು ಎರಡು ಚಿನ್ನ, ಒಂದು ಬೆಳ್ಳಿ ಪದಕ ಗೆದ್ದ ಬಳಿಕ ಭಾರತದ ಮಹಿಳಾ ಸ್ಕ್ವಾಷ್ ತಂಡ ಕಂಚಿನ ಪದಕ ಪಡೆದಿದೆ.
ಇಂದು ನಡೆದ ಮಹಿಳಾ ಸ್ಕ್ವಾಷ್ ತಂಡ ಭರ್ಜರಿ ಪ್ರದರ್ಶನದ ಮೂಲಕ ಕಂಚಿನ ಪದಕ ಗಳಿಸುವ ಮೂಲಕ ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟಿದೆ. ಅನಾಹತ್ ಸಿಂಗ್, ಜೋಶ್ನಾಚಿನ್ನಪ್ಪ, ತನ್ವಿ, ಮತ್ತು ದೀಪಿಕಾ ಪಲ್ಲಿಕಲ್ ಅವರನ್ನೊಳಗೊಂಡ ಭಾರತದ ಮಹಿಳಾ ಸ್ಕ್ವಾಷ್ ತಂಡ ಕಂಚಿನ ಪದಕ ಗೆದ್ದಿದೆ.