ಸಿನಿಮಾಗೆ ʼಸೆನ್ಸಾರ್ʼ ಪ್ರಮಾಣ ಪತ್ರ ಸಿಗಬೇಕು ಅಂದರೆ ಲಂಚ ಕೊಡ್ಬೇಕು :ನಟ ವಿಶಾಲ್ ಗುಡುಗು 29-09-2023 8:18AM IST / No Comments / Posted In: Featured News, Live News, Entertainment ತಮಿಳುನಟ ವಿಶಾಲ್ ಕೃಷ್ಣ ಅವರ ಸಿನಿಮಾ ʼಮಾರ್ಕ್ ಆಂಟೋನಿʼ ಸೆಪ್ಟೆಂಬರ್ 15ರಂದು ತಮಿಳು ಹಾಗೂ ತೆಲುಗುನಿಲ್ಲಿ ರಿಲೀಸ್ ಆಗಿತ್ತು. ಇದೀಗ ಹಿಂದಿ ಭಾಷೆಯಲ್ಲಿಯೂ ಈ ಸಿನಿಮಾ ರಿಲೀಸ್ ಆಗಿದೆ. ಈ ವೇಳೆಯಲ್ಲಿ ವಿಶಾಲ್ ಕೃಷ್ಣ ಸಿಬಿಎಫ್ಸಿ ಭೃಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾದ ಹಿಂದಿ ಆವೃತ್ತಿಗಾಗಿ ಸಿಬಿಎಫ್ಸಿಯಿಂದ ಸೆನ್ಸಾರ್ ಪ್ರಮಾಣ ಪತ್ರ ಸ್ವೀಕರಿಸುವ ಸಂದರ್ಭದಲ್ಲಿ ತಾವು ಎದುರಿಸಿದ ಸಮಸ್ಯೆಗಳ ಬಗ್ಗೆ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಟ್ವೀಟರ್ನಲ್ಲಿ ನಟ ವಿಶಾಲ್ ಕೃಷ್ಣ ಸಿನಿಮಾದ ಸ್ಕ್ರೀನಿಂಗ್ಗಾಗಿ 6.5 ಲಕ್ಷ ರೂಪಾಯಿ ಪಾವತಿ ಮಾಡಿದ್ದೇನೆ. ಇದರಲ್ಲಿ 3 ಲಕ್ಷ ಸ್ಕ್ರೀನಿಂಗ್ಗೆ ಹಾಗೂ 3.5 ಲಕ್ಷ ರೂಪಾಯಿ ಸೆನ್ಸಾರ್ಶಿಪ್ ಪ್ರಮಾಣ ಪತ್ರಕ್ಕೆ ಖರ್ಚು ಮಾಡಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಸಿನಿಮಾಗಳಲ್ಲಿ ಭ್ರಷ್ಟಾಚಾರದ ಬಗ್ಗೆ ತೋರಿಸುತ್ತಿರುವುದು ಸರಿಯಾಗಿದೆ. ಆದರೆ ನಿಜ ಜೀವನದಲ್ಲಿ ಅದನ್ನು ಅರಗಿಸಿಕೊಳ್ಳೋಕೆ ಕಷ್ಟವಾಗುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಹಾಗೂ ಸಿಬಿಎಫ್ಸಿ ಮುಂಬೈ ಕಚೇರಿಯಲ್ಲಿ ಭ್ರಷ್ಟಾಚಾರ ಅತ್ಯಂತ ಕೆಟ್ಟದಾಗಿ ನಡೆಯುತ್ತಿದೆ. ನನ್ನ ಮಾರ್ಕ್ ಆಂಟನಿ ಸಿನಿಮಾದ ಹಿಂದಿ ಆವೃತ್ತಿಗಾಗಿ ನಾನು 6.5 ಲಕ್ಷ ರೂಪಾಯಿ ಲಂಚ ಪಾವತಿ ಮಾಡಬೇಕಾಗಿ ಬಂದಿದೆ. ಸ್ಕ್ರೀನಿಂಗ್ಗೆ 3 ಲಕ್ಷ ಹಾಗೂ ಸೆನ್ಸಾರ್ ಪ್ರಮಾಣಪತ್ರಕ್ಕೆ 3.5 ಲಕ್ಷ ರೂಪಾಯಿ ನೀಡಿದ್ದೇನೆ. ನನ್ನ ವೃತ್ತಿ ಜೀವನದಲ್ಲಿಯೇ ನನಗೆ ಹಿಂದೆಂದೂ ಇಂಥ ಅನುಭವ ಆಗಿರಲಿಲ್ಲ ಎಂದು ಬರೆದುಕೊಂಡಿದ್ದಾರೆ. ಈ ಲಂಚಾವತಾರದ ಬಗ್ಗೆ ನಾನು ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಪ್ರಧಾನಿ ಮೋದಿಯವರ ಗಮನಕ್ಕೆ ತರಲು ಇಚ್ಛಿಸುತ್ತೇನೆ. ಇದು ನಾನು ನನಗಾಗಿ ಮಾಡುತ್ತಿಲ್ಲ. ಭವಿಷ್ಯದ ನಿರ್ಮಾಪಕರ ಹಿತದೃಷ್ಟಿಯಿಂದ ಮಾಡುತ್ತಿದ್ದೇನೆ. ನನ್ನ ದುಡಿಮೆಯ ಹಣ ಇಂದು ಭ್ರಷ್ಟಾಚಾರಕ್ಕೆ ಖರ್ಚಾಗಿದೆ. ಸತ್ಯವು ಒಂದಲ್ಲ ಒಂದು ದಿನ ಮೇಲುಗೈ ಸಾಧಿಸುತ್ತದೆ ಎಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಅಧಿಕ್ ರವಿಚಂದ್ರನ್ ನಿರ್ದೇಶನದ, ಮಾರ್ಕ್ ಆಂಟೋನಿ ಸಿನಿಮಾ ಸೆ. 15ರಂದು ತಮಿಳಿನಲ್ಲಿ ಬಿಡುಗಡೆಯಾಗಿದೆ. ವಿಶಾಲ್ ಹಾಗೂ ಎಸ್ಜೆ ಸೂರ್ಯ ನಾಯಕರಾಗಿ ನಟಿಸಿರುವ ಈ ಸಿನಿಮಾ ದರೋಡೆಕೋರರನ್ನು ಆಧರಿಸಿದ ಸಿನಿಮಾವಾಗಿದೆ. ತಮಿಳು ಆವೃತ್ತಿಯು ಈಗಾಗಲೇ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ. #Corruption being shown on silver screen is fine. But not in real life. Cant digest. Especially in govt offices. And even worse happening in #CBFC Mumbai office. Had to pay 6.5 lacs for my film #MarkAntonyHindi version. 2 transactions. 3 Lakhs for screening and 3.5 Lakhs for… pic.twitter.com/3pc2RzKF6l — Vishal (@VishalKOfficial) September 28, 2023