ಜಾವಾ ಯೆಜ್ಡಿ ಮೋಟಾರ್ ಸೈಕಲ್ಸ್ ಜಾವಾ 42 ಹಾಗೂ ಯೆಜ್ಡಿ ರೋಡ್ಸ್ಟರ್ ಹೊಸ ಡ್ಯುಯಲ್ ಟೋನ್ ರೂಪಾಂತರಗಳನ್ನು ಬಿಡುಗಡೆಗೊಳಿಸಿದೆ. ಎರಡೂ ರೂಪಾಂತರಗಳನ್ನು ನಾಲ್ಕು ಹೊಸ ಬಣ್ಣಗಳ ಆಯ್ಕೆಯಲ್ಲಿ ಕಂಪನಿ ಬಿಡುಗಡೆ ಮಾಡಿದೆ. ಹೊಸ ಜಾವಾ 42 ಡ್ಯೂಯಲ್ ಟೋನ್ ಬೈಕ್ ಬೆಲೆಯು 1,98,142 ರೂಪಾಯಿಗಳಿಂದ ಆರಂಭಗಳ್ಳಲಿದೆ. ಹೊಸ ಯೆಜ್ಡಿ ರೋಡ್ಸ್ಟರ್ 2,08,829 ರೂಪಾಯಿಗಳಿಂದ ಆರಂಭವಾಗುತ್ತದೆ.
ಹೊಸ ಜಾವಾ 42 ಡ್ಯುಯಲ್ ಟೋನ್ ರೂಪಾಂತರವು ಸ್ಟಷ್ಟವಾದ ಲೆನ್ಸ್ ಸೂಚಕಗಳು, ಶಾರ್ಟ್ ಹ್ಯಾಂಗ್ ಫೆಂಡರ್ಸ್ ಹಾಗೂ ಡೈಮಂಡ್ ಕಟ್ ಮಿಶ್ರಲೋಹದ ಚಕ್ರಗಳಿಂದ ಪೂರಕವಾದ ಹೊಸ ಡಿಂಪಲ್ಡ್ ಇಂಧನ ಟ್ಯಾಂಕ್ ಹೊಂದಿದೆ. ಇದು ಮಾತ್ರವಲ್ಲದೇ ಕಾಸ್ಮಿಕ್ ರಾಕ್, ಇನ್ಫಿನಿಟಿ ಬ್ಲ್ಯಾಕ್, ಸ್ಟಾರ್ಶಿಪ್ ಬ್ಲೂ ಹಾಗೂ ಸೆಲೆಸ್ಟಿಯಲ್ ಕಾಪರ್ಯನ್ನು ಒಳಗೊಂಡಿರುವ ಡ್ಯುಯಲ್ ಟೋನ್ ಬಣ್ಣಗಳನ್ನು ಇನ್ನೂ ಹೈಲೈಟ್ ಮಾಡಲು ಇಂಜಿನ್ ಮತ್ತು ಎಕ್ಸಾಸ್ಟ್ ಘಟಕಗಳಿಗೆ ರಾವೆನ್ ಟಕ್ಸ್ಚರ್ ಫಿನಿಶ್ ನೀಡಲಾಗಿದೆ.
ಈ ಹೊಸ ರೂಪಾಂತರವು ಮರುವಿನ್ಯಾಸಗೊಳಿಸಲಾಗಿರುವ ಬ್ಯಾಷ್ಪ್ಲೇಟ್, ಹೊಸ ಹ್ಯಾಂಡಲ್ಬಾರ್- ಮೌಂಟೆಡ್ ಮಿರರ್ಗಳು ಹಾಗೂ ಹೊಸ ಹ್ಯಾಂಡಲ್ಬಾರ್ ಹಿಡಿತಗಳನ್ನು ಒಳಗೊಂಡಿದೆ. ಎಲ್ಲಾ Jawa 42 294.7cc ಲಿಕ್ವಿಡ್-ಕೂಲ್ಡ್ ಸಿಂಗಲ್-ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗುತ್ತದೆ, ಆರು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 27bhp ಮತ್ತು 26.8Nm ಅನ್ನು ಉತ್ಪಾದಿಸುತ್ತದೆ.