ಹತ್ಯೆಗೀಡಾದ ದರೋಡೆಕೋರ ಹಾಗೂ ರಾಜಕಾರಣಿ ಅತಿಕ್ ಅಹ್ಮದ್ ಬಾವ ಸದ್ದಾಂನನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಗುರುವಾರದಂದು ದೆಹಲಿಯಲ್ಲಿ ಬಂಧಿಸಿದೆ.
ಹತ್ಯೆಗೀಡಾದ ಬಿಎಸ್ಪಿ ಶಾಸಕ ರಾಜುಪಾಲ್ ಸಹೋದರ ಉಮೇಶ್ ಪಾಲ್ ಹತ್ಯೆ ಬಳಿಕ ಈತ ಪರಾರಿಯಾಗಿದ್ದ ಎನ್ನಲಾಗಿದೆ. ಹತ್ಯೆ ಬಳಿಕ ದುಬೈಗೆ ಹಾರಿದ್ದ ಸದ್ದಾಂ ಕೆಲವೇ ತಿಂಗಳುಗಳ ಹಿಂದೆ ಭಾರತಕ್ಕೆ ವಾಪಸ್ಸಾಗಿದ್ದ. ಇದಾದ ಬಳಿಕ ಸದ್ದಾಂ ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದ.
ಸದ್ದಾಂ, ಅತಿಕ್ ಅಹ್ಮದ್ ಗ್ಯಾಂಗ್ನೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಅಕ್ರಮ ಭೂಕಬಳಿಕೆ ಹಾಗೂ ಪ್ರಮುಖ ವ್ಯಕ್ತಿಗಳಿಗೆ ಬೆದರಿಕೆ ಹಾಕುವ ಕೆಲಸ ಮಾಡ್ತಿದ್ದ ಎನ್ನಲಾಗಿದೆ. ಬರೇಲಿ ಜೈಲಿನಲ್ಲಿ ಅತೀಕ್ ಅಹ್ಮದ್ ಜೈಲಿನಲ್ಲಿದ್ದಾಗ ಸದ್ದಾಂರನ್ನು ಭೇಟಿಯಾಗುತ್ತಿದ್ದ ಎಂದು ಹೇಳಲಾಗಿದೆ.
ಉಮೇಶ್ ಪಾಲ್ ಕೊಲೆ ಪ್ರಕರಣದ ಬಳಿಕ ಸದ್ದಾಂ ಭೂಗತನಾಗಿದ್ದ. ಪೊಲೀಸರ ಪ್ರಕಾರ, ತನ್ನ ಗುರುತನ್ನ ಬದಲಾಯಿಸಿಕೊಂಡಿದ್ದ. ಪೊಲೀಸರಿಂದ ತಪ್ಪಿಸಿಕೊಳ್ಳೋಕೆ ಈತ ಕರ್ನಾಟಕ, ಮುಂಬೈ ಹಾಗೂ ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಸದ್ದಾಂ ದೆಹಲಿಯಲ್ಲಿ ತನ್ನ ಗೆಳತಿ ಅನಮ್ನನ್ನು ಭೇಟಿಯಾಗಲು ಹೊರಟಿದ್ದಾಗ ಉತ್ತರ ಪ್ರದೇಶದ ಎಸ್ಟಿಎಫ್ನಿಂದ ಬಂಧಿಸಲಾಗಿದೆ.